ಮಂಗಳೂರು ಮಾರ್ಚ್ 03: ಸೈಬರ್ ವಂಚನೆ ಬಗ್ಗೆ ಜನರಿಗೆ ಎಷ್ಟೇ ಮಾಹಿತ ನೀಡಿದರೂ ಕೂಡ ಜನರು ಮಾತ್ರ ಹೊಂಡಕ್ಕೆ ಬೀಳುತ್ತಲೆ ಇದ್ದಾರೆ. ಯಾರೋ ಅಪರಿಚಿತರು ಹೇಳಿದ ಮಾತ್ರಕ್ಕೆ ಲಕ್ಷಗಟ್ಟಲೆ ಹಣವನ್ನು ವರ್ಗಾವಣೆ ಮಾಡುತ್ತಾರೆ. ಅಂತಹುದೆ ಒಂದು ಪ್ರಕರಣ ಮಂಗಳೂರಿನಲ್ಲಿ ನಡೆದಿದ್ದು, ಇನ್ಸ್ಟಾಗ್ರಾಂ ನಲ್ಲಿ ಅಪರಿಚಿತರು ಹೇಳಿದ ಡಿಜಿಟಲ್ ಗೋಲ್ಡ್ ಮಾರ್ಕೆಟ್ ನಲ್ಲಿ ಹಣ ಹೂಡಿಕೆ ಮಾಡಿ ವ್ಯಕ್ತಿಯೊಬ್ಬರು 10 ಲಕ್ಷ ಹಣ ಕಳೆದುಕೊಂಡಿದ್ದಾರೆ.

ದೂರಿನ ಪ್ರಕಾರ ದಿನಾಂಕ 12-11-2025 ರಂದು ಮನೆಯಲ್ಲಿ ಕುಳಿತುಕೊಂಡು ಇನ್ಸ್ಟಾಗ್ರಾಮ್ ನೊಡುತ್ತಿದ್ದಾಗ ವ್ಯಕ್ತಿಯ ರ ಇನ್ಸ್ಟಾಗ್ರಾಮ್ ಐಡಿ ದಕ್ಕೆ ಸುಹಾನಿ ಪಟೆಲ್ ಎಂಬಾತರ ಇನ್ಸ್ಟಾಗ್ರಾಮ್ ಐಡಿ- https://www.instagram.com/suhanipatel34567?igsh=YmI5MmVqb2dq ರವರು ಪರಿಚಯಿಸಿಕೊಂಡು ಸಲುಗೆಯಿಂದ ಮಾತನಾಡಿ ಡಿಜಿಟಲ್ ಗೋಲ್ಡ ಮಾರ್ಕೆಟ್ ನಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚು ಲಾಭ ಗಳಿಸುವುದಾಗಿ ತಿಳಿಸಿದ್ದಾರೆ.
ಬಳಿಕ ಸುಹಾನಿ ಪಟೆಲ್ ಮೊಬೈಲ್ ನಂಬ್ರ-6001127662 ನಿಂದ ಲಿಂಕ್ ಒಂದನ್ನು ಕಳುಹಿಸಿ ಆಪ್ ಇನ್ಸ್ಟಾಲ್ ಮಾಡಲು ವಾಟ್ಸಪ್ ನಲ್ಲಿ ಸಲಹೆ ನೀಡಿದಂತೆ “ಕನಕ್ ದಾಮ್ ಎಕ್ಸಚೇಂಜ್” ಎಂಬ ಆಪ್ ಇನ್ಸ್ಟಾಲ್ ಮಾಡಿಕೊಂಡು ರಿಜಿಸ್ಟರ್ ಆಗಿರುತ್ತಾರೆ. ಸುಹಾನಿ ಪಟೆಲ್ ರವರು ಹಣ ಹೂಡಿಕೆ ಮಾಡಲು ಆಪ್ ನ ಕಸ್ಟಮರ್ ಸರ್ವಿಸ್ ಮೂಖೇನ ವ್ಯವಹರಿಸುವುದಾಗಿ ತಿಳಿಸಿದಂತೆ. ಫಿರ್ಯಾಧಿದಾರರು ಸಂಪರ್ಕ ಮಾಡಿ “please provide the US Dollars for Indian Rupies” ಎಂದು ಸಂದೇಶ ಕಳುಹಿಸಿ ನಂತರ ಸದ್ರಿ ಆರೋಪಿತರು ತಿಳಿಸಿದ ಬ್ಯಾಂಕ್ ಖಾತೆಗಳಿಗೆ ಹಣ ಕಳುಹಿಸಲು ತಿಳಿಸಿದಂತೆ ಫಿರ್ಯಾಧಿದಾರರು ರೂ.1,50,000/-, ರೂ. 3,45,000/- ಮತ್ತು ರೂ 5,60,000/- ಒಟ್ಟು ರೂ. 10,55,000/-ಹಣ ವರ್ಗಾವಣೆ ಮಾಡಿರುತ್ತಾರೆ.
ಈ ವೇಳೆ ““ಕನಕ್ ದಾಮ್ ಎಕ್ಸಚೇಂಜ್” ಆಪ್ ನಲ್ಲಿ ಒಟ್ಟು ಮೊತ್ತ ರೂ. 60 ಲಕ್ಷ ತೋರಿಸುತ್ತಿತ್ತು. ಹಣದ ಅವಶ್ಯಕತೆ ಇರುವುದರಿಂದ ಹಣ ವಿತ್ಡ್ರಾ ಮಾಡಲು ಪ್ರಯತ್ನಿಸಿದಾಗ ಸಾದ್ಯವಾಗದೇ ಇರುವಾಗ, ಈ ಬಗ್ಗೆ ಕಸ್ಟಮರ್ ಸರ್ವಿಸ್ ಗೆ ವಿಚಾರಿಸಿದಾಗ 30 % ಟ್ಯಾಕ್ಸ್ ಮೊತ್ತವನ್ನು ಮೊದಲು ಹಾಕಿದರೆ ಮಾತ್ರ ವಿತ್ಡ್ರಾ ಮಾಡಲು ಸಾಧ್ಯವಾಗುವುದು ಎಂದು ತಿಳಿಸಿರುತ್ತಾರೆ. ನಂತರ ಇದು ಫ್ರಾಡ್, ಇದಕ್ಕೆ ಹಣ ಹಾಕಬೇಡಿ ಎಂದು ಕೆನರಾ ಬ್ಯಾಂಕ್ ನವರು ತಿಳಿಸಿದ್ದಾರೆ ಎಂದು ಸಂದೇಶವನ್ನು ಕಳುಹಿಸಿದ ಕೂಡಲೆ ಸದ್ರಿ ರವರು ಆಪ್ ನಲ್ಲಿರುವ ಹಣವನ್ನು ಶೂನ್ಯ ಮಾಡಿ ಫಿರ್ಯಾಧಿದಾರರನ್ನು ಬ್ಲಾಕ್ ಮಾಡಿರುತ್ತಾರೆ. ಆ ನಂತರವೂ ಫಿರ್ಯಾಧಿದಾರರರಿಗೆ ಯಾವುದೇ ಹಣ ಸಿಗದೇ ಇರುವುದರಿಂದ ಈ ಬಗ್ಗೆ ಸುಹಾನಿ ಪಟೆಲ್ ರವರಿಗೆ ಮೆಸೆಜ್ ಮಾಡಿದಾಗ ಕಳೆದುಕೊಂಡ ಹಣ ಮರಳಿ ಸಿಗುವುದಾಗಿ ಫಿರ್ಯಾಧಿದಾರರಿಗೆ ಈ ತನಕ ನಂಬಿಸಿ ಫಿರ್ಯಾಧಿದಾರರನ್ನು ಬ್ಲಾಕ್ ಮಾಡಿರುತ್ತಾರೆ. ಫಿರ್ಯಾಧಿದಾರರಿಗೆ ದಿನಾಂಕ: 12-11-2025 ರಿಂದ 27-02-2026 ರವರೆಗೆ ಆನ್ಲೈನ್ ಮೂಲಕ ನಂಬಿಸಿ ರೂ 10,55,000/- ವಂಚನೆ ಮಾಡಿದ ವಂಚಕರ ವಿರುದ್ದ ಕಾನೂನು ಕ್ರಮ ತೆಗೆದುಕೊಬೇಕೆಂದು ಕಂಪ್ಲೆಂಟ್ ಕೊಟ್ಟಿದ್ದಾರೆ.