LATEST NEWS
ಡಿಜಿಟಲ್ ಅರೆಸ್ಟ್ ಬೆದರಿಕೆ ಹಾಕಿ ಕೋಟಿ ಹಣ ಲಪಟಾಯಿಸಿದ ಸೈಬರ್ ವಂಚಕ ಅರೆಸ್ಟ್
ಮಂಗಳೂರು ಡಿಸೆಂಬರ್ 25: ಮಂಗಳೂರು ಪೊಲೀಸರು ಸೈಬರ್ ವಂಚಕರ ಬೆನ್ನು ಬಿದ್ದಿದ್ದು, ಇದೀಗ ಡಿಜಿಟಲ್ ಅರೆಸ್ಟ್ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿರುವ ವಂಚಕರನ್ನು ಅರೆಸ್ಟ್ ಮಾಡುತ್ತಿದ್ದಾರೆ. ಟ್ರೈ ಅಧಿಕಾರಿಯೆಂದು ಕರೆ ಮಾಡಿ ವ್ಯಕ್ತಿಯೊಬ್ಬರಿಂದ ₹ 1.71 ಕೋಟಿ ವಂಚನೆ ನಡೆಸಿದ ಪ್ರಕರಣದ ಆರೋಪಿ ಹಾಗೂ ಆನ್‌ಲೈನ್‌ನಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚು ಲಾಭ ಗಳಿಸಬಹುದು ಎಂದು ಆಮಿಷ ವೊಡ್ಡಿ ₹ 10.84 ಲಕ್ಷ ವಂಚನೆ ಮಾಡಿದ ಪ್ರಕರಣದ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರನ್ನು ಕೇರಳದ ಕೋಯಿಕ್ಕೋಡ್ ಜಿಲ್ಲೆಯ ಮಾವೋರ್‌ನ ಆಕಾಶ್ ಎ. (22 ವರ್ಷ) ಹಾಗೂ ಜಾಫರ್ ಕೆ ಎಂದು ಗುರುತಿಸಲಾಗಿದೆ.
ಸೈಬರ್ ವಂಚಕ ಆಕಾಶ್ ವ್ಯಕ್ತಿಯೊಬ್ಬರಿಗೆ ಕರೆ ಮಾಡಿ ತಾನು ಟ್ರೈ ಅಧಿಕಾರಿ ಎಂದು ಹೇಳಿ ನಿಮ್ಮ ಮೊಬೈಲ್ ನಂಬರ್ ಕಾನೂನು ಬಾಹಿರ ಚಟುವಟಿಕೆಗಳಿಗೆ ಬಳಕೆಯಾಗಿದೆ ಎಂದು ಹೇಳಿ ಬಳಿಕ ಪೊಲೀಸರ ಸೋಗಿನಲ್ಲಿ ಕರೆ ಮಾಡಿ ಡಿಜಿಟಲ್ ಅರೆಸ್ಟ್ ಮಾಡಿ ವ್ಯಕ್ತಿಯಿಂದ ಒಟ್ಟು ₹ 1.71 ಕೋಟಿಯನ್ನು ಹಂತ ಹಂತವಾಗಿ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಂಡಿದ್ದರು. ಈ ಕುರಿತಂತೆ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಸೆನ್ ಠಾಣೆಯ ಇಲ್ಲಿನ ಪೊಲೀಸರು ಕೇರಳಕ್ಕೆ ತೆರಳಿ ಆರೋಪಿ ಆಕಾಶ್ ಎ. ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ’ ಎಂದು ಕಮಿಷನರ್ ತಿಳಿಸಿದರು. ‘
ಇನ್ನೊಂದು ಪ್ರಕರಣದಲ್ಲಿ ಆನ್‌ಲೈನ್‌ನಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚು ಲಾಭ ಗಳಿಸಬಹುದು ಎಂದು ನಂಬಿಸಿ ₹ 10.84 ಲಕ್ಷ ಮೊತ್ತವನ್ನು ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡ ಆರೋಪಿಯನ್ನು ಜಾಫರ್ ಕೆ. ಎಂಬಾತನನ್ನೂ ಕೇರಳದಲ್ಲಿ ಬಂಧಿಸಲಾಗಿದೆ.