LATEST NEWS
ಮಂಗಳೂರು : ಡಿಜಿಟಲ್ ಅರೆಸ್ಟ್ ಬೆದರಿಕೆಯಿಂದ 30.65 ಲಕ್ಷ ರೂ ವಂಚನೆ, ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು..!
ಮಂಗಳೂರು : ಅಪರಿಚಿತನೊಬ್ಬ ಪೊಲೀಸ್ ಅಧಿಕಾರಿಯ ಹೆಸರಿನಲ್ಲಿ ಕರೆ ಮಾಡಿ ಹಣದ ವ್ಯವಹಾರ ನೆಪದಲ್ಲಿ (Digital Arrest) ಬೆದರಿಕೆ ಹಾಕಿ 30 ಲಕ್ಷ ರೂ. ಹಣವನ್ನುಆನ್ ಲೈನ್ ಮೂಲಕ ವಂಚಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದ್ದು ಈ ಬಗ್ಗೆ (Cyber Crime) ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ಟೋಬ್ 19 ರಂದು ಅಪರಿಚಿತನೊಬ್ಬ ಮುಂಬೈ ಪೊಲೀಸ್ ಅಧಿಕಾರಿ ಎಂದು ಕರೆ ಮಾಡಿ ‘ನಿಮ್ಮ ಮೊಬೈಲ್ ನಂಬರ್‌ನಲ್ಲಿ ಆನ್‌ಲೈನ್ ವಂಚನೆ ಪ್ರಕರಣ ದಾಖಲಾಗಿದ್ದು, ಮುಂಬೈ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣದಲ್ಲಿ ಪ್ರಕರಣ ದಾಖಲಾಗಿದೆ. ಮುಂಬಯಿ ಸಹರಾ ಠಾಣೆಯಿಂದ ಕರೆ ಮಾಡಿರುವುದಾಗಿ ತಿಳಿಸಿದ್ದಾನೆ. ಅ.19ರಂದು ಬೆಳಗ್ಗೆ 11 ಗಂಟೆಗೆ ವಂಚನೆಗೊಳಗಾದ ವ್ಯಕ್ತಿಗೆ ಮೊಬೈಲ್‌ಗೆ ಪೊಲೀಸ್ ಸಮವಸ್ತ್ರ ಧರಿಸಿದ್ದ ಇನ್ನೊಬ್ಬ ವ್ಯಕ್ತಿ ವಿಡಿಯೊ ಕಾಲ್ ಮಾಡಿ ‘ಎಸ್‌ಬಿಐ ಬ್ಯಾಂಕ್ ಮುಂಬೈನಲ್ಲಿ ವಿವೇಕ್‌ದಾಸ್ ವ್ಯಕ್ತಿ ಅಕೌಂಟ್ ಓಪನ್ ಮಾಡಿ ಮಾನವ ಕಳ್ಳ ಸಾಗಾಣಿಕೆ ಅವ್ಯವಹಾರಗಳನ್ನು ಮಾಡಿದ್ದು, 3.9ಕೋಟಿ ರೂ. ವಂಚನೆ ಮಾಡಿದ್ದಾನೆ. ಈತನ ವಿಚಾರಣೆ ವೇಳೆ ಅವ್ಯವಹಾರ ಹಣದಲ್ಲಿ 38ಲಕ್ಷ ರೂ. ಕಮಿಷನ್ ನಿಮಗೆ ನೀಡಿರುತ್ತಾರೆ’ ಎಂದು ಆರೋಪಿಸಿದ್ದಾನೆ. ಇದಕ್ಕೆ ಒಪ್ಪದಿದ್ದಾಗ ನಿಮ್ಮ ಎಲ್ಲ ಖಾತೆಗಳನ್ನು ಸ್ಥಗಿತಗೊಳಿಸುವುದಾಗಿ ಬೆದರಿಸಿದ್ದಾನೆ. ಮಾತ್ರವಲ್ಲದೆ ಬಂಧನ ವಾರಂಟ್ ಇರುವುದಾಗಿ ಹೇಳಿದ್ದಾನೆ. ಇದರಿಂದ ಗಾಬರಿಗೊಂಡ ತಾನು ಹಂತಹಂತವಾಗಿ 30,65,000ರೂ. ಹಣವನ್ನು ವರ್ಗಾವಣೆ ಮಾಡಿರುವುದಾಗಿ ಲಕ್ಷಾಂತರ ರೂಪಾಯಿ ಕಳಕೊಂಡ ದೂರುದಾರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಹೇಳಿದ್ದಾರೆ.