Connect with us

LATEST NEWS

ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿರುವ ದಿಗಂತ್ ನಾಪತ್ತೆ ಪ್ರಕರಣ – ಮನೆಗೆ ವಾಪಾಸ್ ಹೋಗಲ್ಲ ಎಂದ ದಿಗಂತ್…?

ಮಂಗಳೂರು ಮಾರ್ಚ್ 11: ಇಡೀ ರಾಜ್ಯದಲ್ಲಿ ಸುದ್ದಿಯಾಗಿದ್ದ ದಿಗಂತ್ ನಾಪತ್ತೆ ಪ್ರಕರಣ ಕೊನೆಗೂ ಸುಖಾಂತ್ಯ ಕಂಡಿದೆ. 12 ದಿನಗಳ ಬಳಿಕ ಉಡುಪಿಯಲ್ಲಿ ದಿಗಂತ್ ಪತ್ತೆಯಾಗಿದ್ದಾನೆ. ಇದೀಗ ಪ್ರಸ್ತುತ ಬಾಲಮಂದಿರದಲ್ಲಿರುವ ದಿಗಂತ್ ನನ್ನು ಮಾ. 12ರಂದು ಹೈಕೋರ್ಟ್‌ಗೆ ಹಾಜರುಪಡಿಸುವ ಸಾಧ್ಯತೆ ಇದೆ. ನಿಗೂಢವಾಗಿ‌ ನಾಪತ್ತೆಯಾಗಿದ್ದ ಫರಂಗಿಪೇಟೆ ಕಿದೆಬೆಟ್ಟು ‌ನಿವಾಸಿ ದಿಗಂತ್ ನಿಗೂಢ ರೀತಿಯಲ್ಲಿ ಪತ್ತೆಯಾಗಿದ್ದು, ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಗೊಂದಲಗಳಿಗೆ ಕಾರಣವಾಗಿದೆ.


ದಿಗಂತ್ ಪತ್ತೆಯಾದ ಕೂಡಲೇ ಪೋಲೀಸರ ಆತನನ್ನು ವಶಕ್ಕೆ ಪಡೆದುಕೊಂಡು ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ನೇತ್ರತ್ವದಲ್ಲಿ ಮಂಗಳೂರಿಗೆ ಕರೆತಂದಿದ್ದಾರೆ. ಈ ವೇಳೆ ವಿಚಾರಣೆ ನಡೆಸಿದಾಗ ಪಿಯುಸಿ ಪರೀಕ್ಷೆ ಭಯದಿಂದ ನಾನು ಮನೆ ಬಿಟ್ಟು ಹೋಗಿದ್ದೆ ಎಂದು ಹೇಳಿದಾನೆ. ಆದರೆ ಫರಂಗಿಪೇಟೆ ಕಿದೆಬೆಟ್ಟಿನ ದಿಗಂತ್ ಪತ್ತೆಯಾದ ಬಳಿಕವೂ ಪ್ರಕರಣದಲ್ಲಿ ಬೇರೆಬೇರೆ ಆಯಾಮಗಳು ಕಂಡು ಬರುತ್ತಿದ್ದು, ಫೆ. 25ರಂದು ಆತ ಮನೆಯಿಂದ ಹೋಗುವಾಗಲೇ ಬ್ಯಾಗೊಂದರಲ್ಲಿ ಕೆಲವು ಉಡುಪುಗಳನ್ನು ಕೊಂಡು ಹೋಗಿದ್ದಾನೆ ಎಂಬ ಮಾಹಿತಿ ಹೊರ ಬಿದ್ದಿದೆ.

ಆತ ಶರ್ಟ್‌ಗಳಿದ್ದ ಬ್ಯಾಗ್‌ಗಳನ್ನು ಮೊದಲೇ ರೈಲು ಹಳಿಯ ಬಳಿ ಇಟ್ಟಿರುವ ಸಾಧ್ಯತೆಗಳಿವೆ. ಆತ ಫರಂಗಿಪೇಟೆ ವ್ಯಾಯಾಮ ಶಾಲೆಯ ಬಳಿ ಓಡಾಡಿರುವ ದೃಶ್ಯಗಳು ಸಿಸಿಕೆಮರಾದಲ್ಲಿ ಸೆರೆಯಾಗಿದ್ದು, ಆಗ ಆತನ ಕೈಯಲ್ಲಿ ಬ್ಯಾಗ್ ಇರಲಿಲ್ಲ. ಮನೆ ತೊರೆಯುವಾಗ ಆತನಲ್ಲಿ ಬೇರೆ ಮೊಬೈಲ್ ಇದ್ದಿರುವ ಸಾಧ್ಯತೆಯೂ ಹೆಚ್ಚಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಸಂದರ್ಭದಲ್ಲಿ ಆತನನ್ನು ವಿಚಾರಣೆಗೆ ಒಳಪಡಿಸಿದ ಪೋಲೀಸರಿಗೆ ಆತ ಯಾವ ಕಾರಣಕ್ಕೆ ಮನೆ ಬಿಟ್ಟು ತೆರಳಿರುವುದು ಎಂಬುದರ ಬಗ್ಗೆ ವಿಚಾರವನ್ನು ತಿಳಿಸಿರುತ್ತಾನೆ. ಮತ್ತು ಮಹತ್ವದ ಹೇಳಿಕೆಯನ್ನು ಕೂಡ ಹೇಳಿರುತ್ತಾನೆ. ನಾನು ವಾಪಸು ಮನೆಗೆ ಹೋಗುವುದು ಇಲ್ಲ ಎಂಬ ಮಾತನ್ನು ಪೋಲೀಸರಲ್ಲಿ ಹೇಳಿಕೊಂಡಿದ್ದಾನೆ. ಆದರೆ ಯಾವ ಕಾರಣಕ್ಕಾಗಿ ವಾಪಸು ಮನೆಗೆ ಹೋಗುವುದಿಲ್ಲ ಎಂಬುದನ್ನು ಪೋಲೀಸರು ಸ್ಪಷ್ಟಪಡಿಸಿಲ್ಲ. ಇದೇ ಮಾತನ್ನು ಆತನ ಪೋಷಕರ ಬಳಿಯೂ ಹೇಳಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಈತನ ಈ ಹೇಳಿಕೆ ಒಂದಷ್ಟು ಗೊಂದಲಕ್ಕೆ ಕಾರಣವಾಗಿದೆ. ಸತತವಾಗಿ 12 ದಿನಗಳ ಕಾಲ ಊರೂರು ಸುತ್ತಿದ ದಿಗಂತ್ ಉಡುಪಿಯಲ್ಲಿ ಸಿಕ್ಕಿಹಾಕಿಕೊಂಡ ಬಳಿಕ ಮನೆಗೆ ತೆರಳುವುದಿಲ್ಲ ಎಂಬ ಮಾತಿನ ಮರ್ಮವೇನು? ಎಂಬುದು ನಿಗೂಢವಾಗಿ ಉಳಿದಿದೆ.

Share Information
Continue Reading
Advertisement
1 Comment

1 Comment

    Leave a Reply

    Your email address will not be published. Required fields are marked *