BANTWAL
ಇನ್ನೂ ಪತ್ತೆಯಾಗದ ದಿಗಂತ್ – ಪೊಲೀಸ್ ಇಲಾಖೆಗೆ ಸವಾಲಾದ ಪ್ರಕರಣ

ಬಂಟ್ವಾಳ ಮಾರ್ಚ್ 05: ದಕ್ಷಿಣಕನ್ನಡ ಜಿಲ್ಲೆಯ ಪೊಲೀಸರಿಗೆ ವಿಧ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣ ಸವಾಲಾಗಿ ಪರಿಣಮಿಸಿದೆ. ಕೊಟೆಕಾರ್ ಬ್ಯಾಂಕ್ ದರೋಡೆ, ನಾರ್ಶ ಸಿಂಗಾರಿ ಬೀಡಿ ಮಾಲೀಕನ ಮನೆ ದರೋಡೆ ಪ್ರಕರಣದಂತಹ ಕಷ್ಟದ ಪ್ರಕರಣವನ್ನು ಬಗೆಹರಿಸಿರುವ ದಕ್ಷಿಣಕನ್ನಡ ಜಿಲ್ಲೆಯ ಪೊಲೀಸರಿಗೆ ಒಂದು ಸಣ್ಣ ನಾಪತ್ತೆ ಪ್ರಕರಣ ಬಗಹರಿಸಲಾಗದೇ ಇರುವುದು ಆಶ್ಚರ್ಯ ತರುವಂತಿದೆ.

ಮಂಗಳೂರಿನಲ್ಲಿ ಪಿಯುಸಿ ವಿಧ್ಯಾರ್ಥಿಯಾಗಿರುವ ಫರಂಗಿಪೇಟೆ ಕಿದೆಬೆಟ್ಟಿನ ದಿಗಂತ್ ನಾಪತ್ತೆಯಾಗಿ 9 ದಿನಗಳು ಕಳೆದಿದೆ. ಆದರೆ ಇಲ್ಲಿಯವರೆಗೆ ಪೊಲೀಸರಿಗೆ ಯಾವುದೇ ರೀತಿ ಸುಳಿವು ಕೂಡ ಸಿಕ್ಕಿಲ್ಲ. ಇಡೀ ಜಿಲ್ಲೆಯ ಪೊಲೀಸರನ್ನು ಬಳಸಿಕೊಂಡರು ಯಾವುದೇ ಮಹತ್ವದ ಸುಳಿವು ಈ ಪ್ರಕರಣದಲ್ಲಿ ಸಿಕ್ಕಿಲ್ಲ ಅನ್ನೊದು ತಿಳಿದು ಬಂದಿದೆ.

ವಿದ್ಯಾರ್ಥಿ ನಾಪತ್ತೆಯ ಪ್ರಕರಣ ಸಾಕಷ್ಟು ಕುತೂಹಲವನ್ನು ಸೃಷ್ಟಿಸಿದ್ದು, ಓರ್ವ ವಿದ್ಯಾರ್ಥಿ ಯಾವುದೇ ಸುಳಿವು ನೀಡದೆ ನಾಪತ್ತೆಯಾಗಿರುವುದು ಪೊಲೀಸ್ ಇಲಾಖೆಯ ನಿದ್ದೆಗೆಡಿಸಿದೆ. ಎಂತಹ ಕ್ರಮಿನಲ್ ತಪ್ಪಿಸಿಕೊಂಡರೂ ಒಂದೆರಡು ದಿನಗಳಲ್ಲಿ ಆತನ ಸಂಪೂರ್ಣ ಚಿತ್ರಣವನ್ನು ಬಯಲಿಗೆಳೆಯುವ ಪೊಲೀಸರಿಗೆ ಈ ಬಹಳ ಬಹಳಷ್ಟು ಸವಾಲಾಗಿ ಪರಿಣಮಿಸಿದೆ. ಪೊಲೀಸರು ಇತರ ಎಲ್ಲಾ ಪ್ರಕರಣಗಳನ್ನು ಬದಿಗೊತ್ತಿ ತಮ್ಮ ಸಂಪೂರ್ಣ ಕೌಶಲ್ಯಗಳನ್ನು ಇದೇ ಪ್ರಕರಣಕ್ಕೆ ಹಾಕಿ ದಿಗಂತ್‌ನ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ. ಈ ಬಗ್ಗೆ ದಕ್ಷಿಣಕನ್ನಡ ಜಿಲ್ಲಾ ಎಸ್ಪಿಯವರ ಹತ್ತಿರ ಕೇಳಿದರೆ ಪ್ರಕರಣದ ತನಿಖೆ ನಡೆಯುತ್ತಿದ್ದು, ಆತನ ಕುರಿತು ಯಾವುದೇ ಮಹತ್ವದ ಸುಳಿವು ಸಿಕ್ಕಿಲ್ಲ. ಮಾಹಿತಿ ಸಿಕ್ಕಿದ ಬಳಿಕವೇ ಇಲಾಖೆಯೇ ಅದರ ಕುರಿತು ವಿತರಣೆ ನೀಡುತ್ತದೆ ಎಂದು ಹೇಳಿದ್ದಾರೆ. ಈಗಾಗಲೇ ವಿವಿಧ ಸಂಘಟನೆಗಳು ಪೊಲೀಸರಿಗೆ ನೀಡಿದ್ದ ಗಡುವು ಮುಗಿದಿದೆ. ಆದರೂ ದಿಗಂತ್ ಇನ್ನೂ ನಾಪತ್ತೆಯಾಗಿಯೇ ಉಳಿದಿದ್ದಾನೆ.
2 Comments