LATEST NEWS
ಸಿನಿಮೀಯ ಶೈಲಿಯಲ್ಲಿ 1 ಕೆಜಿ ಅಕ್ರಮ ಚಿನ್ನ ಸಾಗಾಟಕ್ಕೆ ಯತ್ನ

ಮಂಗಳೂರು ವಿಮಾನ ನಿಲ್ದಾಣ 1 ಕೆಜಿ ಅಕ್ರಮ ಚಿನ್ನ ಸಾಗಾಟಕ್ಕೆ ಬಳಸಿದ ವಿಚಿತ್ರ ತಂತ್ರ
ಮಂಗಳೂರು ಅಕ್ಟೋಬರ್ 22: ಸುಮಾರು ಒಂದು ಕಿಲೋ ತೂಕದ ಚಿನ್ನವನ್ನು ಸಿನಿಮೀಯ ಶೈಲಿಯಲ್ಲಿ ಕಾಲಿಗೆ ಅಂಟಿಸಿಕೊಂಡು ದುಬೈನಿಂದ ಬಂದ ಆರೋಪಿಯೋರ್ವನನ್ನು ಮಂಗಳೂರು ವಿಮಾನ ನಿಲ್ದಾಣಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಕಾಸರಗೋಡು ನಿವಾಸಿ ರಫೀಕ್ ಮೊಯಿದೀನ್ (36) ಕಸ್ಟಮ್ಸ್ ಅಧಿಕಾರಿಗಳ ಬಲೆಗೆ ಬಿದ್ದ ಚಿನ್ನದ ಕಳ್ಳ ಸಾಗಾಣಿಕೆದಾರನಾಗಿದ್ದಾನೆ. ಈತ ತನ್ನ ಎರಡೂ ಕಾಲಿನ ಉದ್ದಕ್ಕೂ ಚಿನ್ನದ ಹುಡಿ ತುಂಬಿದ ಪ್ಲಾಸ್ಟಿಕ್ ಕವರನ್ನು ಗಮ್ ಮೂಲಕ ಅಂಟಿಸಿಕೊಂಡಿದ್ದ. ಯಾರಿಗೂ ಅನುಮಾನವೇ ಬಾರದ ರೀತಿಯಲ್ಲಿ ಸಿಮಿಮೀಯ ಶೈಲಿಯಲ್ಲಿ ಈತ ಚಿನ್ನ ಸಾಗಿಸುವ ಪ್ರಯತ್ನ ನಡೆಸಿದ್ದಾನೆ. ಆದರೆ ವಿಮಾನ ನಿಲ್ದಾಣದಲ್ಲಿರುವ ಚಿನ್ನ ಪತ್ತೆಹಚ್ಚುವ ವಿಶೇಷ ಸಾಧನದ ಮೂಲಕ ಈತನ ತಂತ್ರ ಬಯಲಾಗಿದೆ. ಆರೋಪಿಯನ್ನು ಬಜ್ಪೆ ಪೋಲೀಸ್ ವಶಕ್ಕೆ ಕಸ್ಟಮ್ಸ್ ಅಧಿಕಾರಿಗಳು ಒಪ್ಪಿಸಿದ್ದಾರೆ.
