LATEST NEWS
ದಿನಕ್ಕೊಂದು ಕಥೆ- ಕಡಲು
ಕಡಲು
ಅಲ್ಲಯ್ಯ ಪರಿಧಿ ಕಾಣದೆ ಅನಂತತೆಯಲ್ಲಿ ಮುಳುಗಿರುವ ಕಡಲೆ, ನಿನ್ನಲ್ಲಿ ಏಕೆ ಅಷ್ಟೊಂದು ನೀರು. ಅಲ್ಲ ನಿನಗೆ ನೀರಿಲ್ಲದ ಊರಿನ ಜನರ ಬಿಕ್ಕಳಿಕೆ ಕೇಳುವುದಿಲ್ಲವಾ? ನಿನ್ನ ಆರ್ಭಟವೇನು?, ಅಟ್ಟಹಾಸವೇನು?. ಎಲ್ಲಾ ಸಣ್ಣಪುಟ್ಟ ನದಿ ತೊರೆಗಳನ್ನು ಕೈಬೀಸಿ ಕರೆದು ನಿನ್ನ ತಳದೊಳಗೆ ಸೇರಿಸಿಕೊಂಡು ಸಿಹಿಯನ್ನು ಉಪ್ಪಾಗಿಸಿದ್ದೀಯಾ.
ನಿನಗೆ ಏನಂತ ಹೆಸರಿಡಲಿ. ಆಸ್ತಿಯನ್ನೆಲ್ಲಾ ಬಚ್ಚಿಡುವಾಜಿಪುಣನ ಅನ್ನಲಾ?, ಕಬಳಿಸುವ ರಾಕ್ಷಸ ಎನಲಾ ಗೊತ್ತಿಲ್ಲ ?.ಜೋರು ಬಾಯಾರಿ ನಿನ್ನ ಬಳಿ ಕುಡಿಯೋಕೆ ಬಂದರೆ ನೀನು ನೀರು ನೀಡುವವನಲ್ಲ.ರಾತ್ರಿ ಹೊತ್ತು ಚಂದ್ರ ತಾರೆಗಳ ಜೊತೆ ಸರಸ ಸಲ್ಲಾಪ ನಡೆಸುತ್ತೀಯಾ, ಬೆಳಗ್ಗೆ ಸೂರ್ಯನೊಂದಿಗೆ ಗೆಳೆತನ ಬೆರೆಸಿ ನಿನ್ನ ನೀರನ್ನ ಮೋಡವಾಗಿಸುತ್ತೀಯಾ,
ನಿನ್ನೊಳಗೆ ಕ್ರೂರ ಜಂತುಗಳನ್ನು ತುಂಬಿಕೊಂಡು ಆಗಾಗ ಶಾಂತವಾಗಿ ವರ್ತಿಸುತ್ತೀಯಾ.
ಅಲ್ಲಿಯೇ ಉಳಿದಿರುವ ಪುಟ್ಟ ದಡವನ್ನು ಕಸಿಯುವ ಆಕ್ರೋಶವನ್ನು ಹೆಚ್ಚಿಸುತ್ತಾನೆ ಇದ್ದೀಯ .ನೀನು ಪೋಷಿಸುತ್ತಾನೇ ಸಂಹರಿಸುತ್ತೀಯಾ . ನಿನ್ನಲ್ಲಿ ಸಂಭ್ರಮವಿದೆ, ದುಃಖವೂ ಇದೆ. ಭಯವೂ ಇದೆ ನೆಮ್ಮದಿಯೂ ಇದೆ. ಹೀಗೆ ಎರಡೆರಡು ಮುಖವನ್ನು ತೋರಿಸುತ್ತಾ ಇರುವ ನಿನಗೆ ಏನೆಂದು ಹೆಸರಿಡಲಿ….
ಧೀರಜ್ ಬೆಳ್ಳಾರೆ