LATEST NEWS
ದಿನಕ್ಕೊಂದು ಕಥೆ- ಘೋಷಣೆ

ಘೋಷಣೆ
ನಾನೇ ಕಿವಿ ಮೆಚ್ಚಿಕೊಳ್ಳಬೇಕೋ, ಅವರನ್ನು ಹೊರಗೆ ಹೊರದಬ್ಬಬೇಕೋ, ಜೋರಿನಿಂದ ನನ್ನೆದೆಯ ವಾಕ್ಯವನ್ನು ಘೋಷಣೆ ಮಾಡಬೇಕೋ ತೋಚುತ್ತಿಲ್ಲ. ಅನ್ನ-ನೀರು ನನ್ನೂರಿನದ್ದಾದಾಗ ಬದುಕಿನ ಋಣ ಇಲ್ಲಿಯದ್ದಾಗಬೇಕಲ್ಲಾ . ಅದೇಕೆ ಆ ದೇಶ ಅವರಿಗೆ ಅಷ್ಟೊಂದು ಆಪ್ಯಾಯಮಾನವಾಗುತ್ತದೆ.
ನನ್ನೂರಿನ ಅಭಿವೃದ್ಧಿಗೆ ಗೆಲುವು ಸಾಧಿಸಿದವರು ಅದೇನು ತೋರಿಸಲು ಹೊರಟಿದ್ದಾರೆ?. ನನ್ನ ಕೋಣೆಯೊಳಗೆ ಉಸಿರು ಕಟ್ಟುತ್ತಿದ್ದರೆ ಅಲ್ಲಿದ್ದು ಕೂಗುವುದಕ್ಕಿಂತ ಬಾಗಿಲು ತೆರೆದು ಹೊರ ಹೋಗಿ ಬಿಡುವುದು ಒಳಿತು. ಗ್ರಾಮಾಭಿವೃದ್ಧಿಯ ಹರಿಕಾರನಿಗೆ ದೇಶವೇ ಇಷ್ಟವಿಲ್ಲವೆಂದು ಮೇಲೆ ಗ್ರಾಮೋದ್ದಾರ ಹೇಗೆ? ನನ್ನ ಮನೆಯೊಳಗೆ ನಾ ಯಾರನ್ನು ಹೊಗಳಿದರೂ, ನನ್ನ ಮನೆಯನ್ನು ಜರಿದು, ಉಗುಳಿ, ತಿರಸ್ಕರಿಸಿದರು ನನ್ನ ಏನೂ ಮಾಡಲ್ಲ ಅನ್ನು ಅಹಂಕಾರ ನನ್ನೊಳಗೆ ಕೆಟ್ಟ ಯೋಚನೆಯನ್ನು ಮೂಡಿಸಬಹುದು ಅಲ್ವಾ ?.

ಅಂದೊಮ್ಮೆ ದೂರದಲ್ಲಿ ಕೇಳುತ್ತಿದ್ದ ವಿರೋಧದ ಕೂಗು ಮನೆಯ ಪಕ್ಕಕ್ಕೆ ಬಂದಿದೆ, ನಮ್ಮೊಳಗೊಬ್ಬನಿಗೆ ಬಂದಿದೆ. ಇನ್ನೊಂದೆರಡು ಪತ್ರಿಕಾ ಪ್ರಕಟನೆ ,ಉಗ್ರವಾದ ಮಾತು, ಕಂಬಿಯೊಳಗವರ ಮುಖ ಮತ್ತೊಮ್ಮೆ ರಾಜರೋಷವಾಗಿ ತಿರುಗಾಟ.
ನಿದ್ರೆ ಬರುತ್ತಿಲ್ಲ ಯೋಚನೆಗಳು ಕೊರೆಯುತ್ತಿದೆ ಅಲೆಗಳೆದ್ದ ಮೇಲೆ ಶಾಂತವಾಗಲು ಕೆರೆಗೆ ಎಷ್ಟು ಸಮಯ ಬೇಕೋ…..
ಧೀರಜ್ ಬೆಳ್ಳಾರೆ