LATEST NEWS
ದಿನಕ್ಕೊಂದು ಕಥೆ- “ಮಾನವ?”
“ಮಾನವ?”
ನಮ್ಮೂರಿನ ಗುಡ್ಡದಿಂದ ಇಳಿದು ಬರುವ ಸಣ್ಣ ತೊರೆಯು ಗದ್ದೆ ತೋಟಗಳನ್ನು ಹಾದು, ರೋಡು ಬೆಟ್ಟವನ್ನು ಹತ್ತಿ ಇಳಿದು, ಧುಮುಕಿ, ನದಿಯಾಗಿ ಸಾಗರವನ್ನು ಸೇರುತ್ತದೆ. ನಮ್ಮೂರಿನ ಗುಡ್ಡದಲ್ಲಿ ಹುಟ್ಟುವ ನೀರನ್ನ ಮಾತನಾಡಿಸುವ ಆಸೆಯಿಂದ ಸಮುದ್ರದ ಬಳಿ ಹೋದರೆ ಅಲ್ಲಿ ಪರಿಚಯವೇ ಸಿಗದೆ ವಾಪಸು ಬಂದುಬಿಟ್ಟಿದ್ದೆ.
ನನ್ನ ನದಿಯನ್ನ ಬದಲಾಯಿಸಿದ್ದಾರೆ ಶಾಂತನಾಗಿ ನಗುತ್ತಿದ್ದವ ಮಾಲಿನ್ಯದಿಂದ ಕೊರಗಿ ಅಲೆಯುತ್ತಿದ್ದಾನೆ. ಇದನ್ನ ಬದಲಾಯಿಸುವ ಮನಸ್ಸಿರುವವರು ಯಾರೂ ಕಾಣದಿದ್ದಾಗ ದೇವರನ್ನು ಪ್ರಾರ್ಥಿಸಿದೆ. ಅವನೆಂದ “ಅಯ್ಯೋ ನನ್ನನ್ನ ಏನು ಅಂದುಕೊಂಡಿದ್ದೀಯಾ ?ನಿನ್ನಿಷ್ಟದ ರೂಪ ಆಕಾರ ಆಚಾರ ವಿಚಾರಗಳನ್ನು ಸೇರಿಸಿ ನಿನ್ನದೇ ಸಂಪ್ರದಾಯವನ್ನು ಆರಂಭಮಾಡಿ ನನ್ನನ್ನು ಹುಟ್ಟಿಸಿದೆ.
ನಾನೆಲ್ಲಾದರೂ ನನಗಿದು ಬೇಕು ಅಂತ ನಿನ್ನಲ್ಲಿ ಬೇಡಿದ್ದೇನಾ? ಬೀದಿ ಬದಿ ಮಾರಾಟ ಮಾಡುತ್ತಿದ್ದೀಯಾ ?ಅದರಲ್ಲಿ ಚೌಕಾಸಿ ಬೇರೆ. ಚಿರಂಜೀವಿ ಆಗಿರುವ ನನ್ನ ಭಾವಚಿತ್ರಕ್ಕೆ ಬಾಳಿಕೆನೇ ಕೆಲವು ದಿನ ಮಾತ್ರ. ನನ್ನನ್ನು ವ್ಯಾಪಾರ-ವ್ಯವಹಾರದ ದೃಷ್ಟಿಯಿಂದ ನೋಡುತ್ತಾ ಇದಿಯಾ ?ನಿನ್ನಂಥವನ ಸೃಷ್ಟಿಸಿದ್ದು ನಾನೇನಾ ಅನ್ನೋ ಸಂಶಯ ಬರುವ ತರಹ ನೀನು ವರ್ತಿಸುತ್ತಾ ಇದ್ದೀಯಾ!.
ಕೈ ಹಿಡಿದು ನಡೆಸೋಣವೆಂದರೆ ಕೊಡವಿ “ನಾನೊಬ್ಬನೇ ನಡೆಯುತ್ತೇನೆ ಎನ್ನುವಂಥ ನಿನ್ನಂಥವರಿಗೆ ನನ್ನಿಂದ ಸಹಾಯ ಸಾದ್ಯವಾಗಲಿಕ್ಕಿಲ್ಲ. ಹೀಗೇ ವಿವೇಚನೆ ನೀಡಿರೋದು?.. ಅಂತ ಅನಿಸ್ತಾ ಇದೆ. ಮಾನವ ಮಾ”ನವ”ನಾಗುತ್ತಿದ್ದಾನೆ “.ನನ್ನೊಬ್ಬನನ್ನು ಹೃದಯಮಂದಿರದಲ್ಲಿ ಪೂಜಿಸುವುದನ್ನ ಬಿಟ್ಟು ಮಸೀದಿ ದೇವಸ್ಥಾನ ಚರ್ಚುಗಳನ್ನು ಹೆಚ್ಚಿಸುತ್ತದೀರಾ? ನಿಮ್ಮ ಪಕ್ಕದ ಮನೆಯಲನ್ನು ಬಡತನದ ನೋವು ನುಂಗಿದ್ದರೆ, ನಿಮ್ಮೂರಿನ ಶಾಲೆ ಚೆನ್ನಾಗಿ ನಡೀತಿದೆಯಾ?, ಮನೇಲ್ ಒಂದ್ಸಲ ಅಮ್ಮನ ಹತ್ತಿರ ಊಟ ಆಯ್ತಾ ಕೇಳು? ಇದರ ಜೊತೆಗೆ ನಾ ಕೊಟ್ಟಿರುವ ಬುದ್ಧಿಯಿಂದ ಒಂದಷ್ಟು ಕೆಲಸ ಮಾಡು ನಿನ್ನ ನದಿ ಹುಟ್ಟುವಾಗ ಹೇಗಿತ್ತೋ ಹಾಗೆಯೇ ಮತ್ತು ನಿನ್ನ ಕೈಗೆ ಸಿಗುತ್ತೆ ….ಕಾಯಬೇಕಷ್ಟೆ
ಧೀರಜ್ ಬೆಳ್ಳಾರೆ