LATEST NEWS
ದಿನಕ್ಕೊಂದು ಕಥೆ- ಕಾರಣ ಯಾರು?

ಕಾರಣ ಯಾರು?
ನಾನು ನೇರವಾಗಿ ಹೇಳುತ್ತೇನೆ ಅಂತ ಬೇಜಾರ್ ಆದರೂ ಪರವಾಗಿಲ್ಲ?. ನನಗೆ ಯಾರು ಕಾರಣ ಅಂತ ಗೊತ್ತಾಗಬೇಕು?. ನಾನ್ಯಾರು ಅಂತನಾ…. ನನ್ನ ಹೆಸರು? ಅದು ನಿಮಗ್ಯಾಕೆ ನೀವು ಅಕ್ಕ-ತಂಗಿ ,ಪಕ್ಕದ ಮನೆಯವಳು, ಗೆಳತಿ, ಯಾರೋ ಒಬ್ಳು ಅನ್ಕೊಳ್ಳಿ ತೊಂದರೆ ಇಲ್ಲ.
ನಮ್ಮೂರು ನೀವು ನೋಡಿದ ಊರಿನ ಹಾಗಿರುವುದೇ ಒಂದು ಹಳ್ಳಿ. ಅಲ್ಲಿ ಪೇಟೆ ಅನ್ನೋದು ಸಿಗಬೇಕಾದರೆ ಒಂದಷ್ಟು ದೂರ ನಡೀಬೇಕು. ನಾನೀಗ ಸಧ್ಯಕ್ಕೆ ಬದುಕಿಲ್ಲ. ನನ್ನ ಸಾಯಿಸಿದ್ದಾರೆ ಅತ್ಯಾಚಾರ ಮಾಡಿ!. ನನ್ನ ಅತ್ಯಾಚಾರಕ್ಕೆ ಕಾರಣ ಏನು ಅನ್ನೋದು ಬೇಕು. ನಮ್ಮ ಶಾಲೆಯಲ್ಲಿ ಕಂಪ್ಯೂಟರ್ ಇಲ್ಲ ಹಾಗಾಗಿ ಇರುವ ಎರಡು ಕಂಪ್ಯೂಟರನ್ನು ವಿದ್ಯಾರ್ಥಿಗಳಿಗೆ ತಂಡಗಳಾಗಿ ವಿಭಾಗಿಸಿ ನೀಡುತ್ತಾರೆ.

ನನಗವತ್ತು ಸಿಗುವಾಗ ಗಂಟೆ 6:00 ಮನೆಗೆ ಹೋಗುವಾಗ. ಹಾಗಾಗಿ ಕಂಪ್ಯೂಟರ್ ಕಾರಣನಾ?. ನಮ್ಮೂರಿನಿಂದ ಶಾಲೆಗೆ 5 ಕಿಲೋಮೀಟರ್ ನಡಿಬೇಕು. ಸರಿಯಾದ ಬಸ್ಸಿಲ್ಲ ಜೊತೆಗೆ ರಸ್ತೆಯೂ ಇಲ್ಲ. ಊರಿಗೆ ವಿದ್ಯುತ್ ಇಲ್ಲ ಆ ಕಾರಣಕ್ಕೆ ಎಲ್ಲ ಅಂಗಡಿಗಳು ಬೇಗ ಮುಚ್ಚಿಕೊಳ್ಳುವುದರಿಂದ ನಾವು ಊರಿಗೆ ತಲುಪುವಾಗ ಜನರಿರಲಿಲ್ಲ .ಇಲ್ಲಿ ವಿದ್ಯುತ್, ರಸ್ತೆ,ಮತ್ತು ಬಸ್ಸು ಕಾರಣಾನ? ಅಪ್ಪನ ಖಾಸಗೀ ಶಾಲೆಗೆ ಸೇರಿಸಿದ್ದರೆ ಅವರದೇ ಬಸ್ಸು ನನ್ನ ಮನೆಗೆ ತಲುಪುತ್ತಿತ್ತು.
ಇಲ್ಲಿ ನಮ್ಮಪ್ಪ ಕಾರಣನಾ? ನನ್ನ ಅತ್ಯಾಚಾರ ಮಾಡಿದವರಿಗೆ ಜೀವನ್ಮರಣ ಶಿಕ್ಷೆಯೂ ಸಿಗಲಿಲ್ಲ, ಅವರಿಗೆ ಜೀವನ ಮೌಲ್ಯಗಳ ಅರಿವೇ ಗೊತ್ತಿರಲಿಲ್ಲ ಹಾಗಾಗಿ ಅದು ಕಾರಣನಾ ?..ಕಾನೂನು ಭಯ ಹುಟ್ಟಿಸುತ್ತಿಲ್ಲ ಹಾಗಾಗಿ ಕಾನೂನು ಕಾರಣನಾ?… ನೀವು ಬರಿ ಸ್ಟೇಟಸ್ ಹಾಕಿ ಸುಮ್ಮನಾಗುತ್ತಿರಲಿಲ್ಲ ನೀವು ಕಾರಣ ತಾನೆ?…. ಊರಿಗೆ ಬಂದ ಹಣವನ್ನು ಯಾರು ಮಧ್ಯದಲ್ಲಿ ತಿಂತಾ ಇದ್ದಾರಲ್ಲ ಅವರು ಕಾರಣಾನಾ…. ನನ್ನ ಅತ್ಯಾಚಾರಕ್ಕೆ ಇದರಲ್ಲಿ ಯಾವ ಕಾರಣವನ್ನು ಆರಿಸಿಕೊಳ್ಳಲಿ… ಮೌನವಾಗಿರಲು ನೀವು ಕೂಡ ಇನ್ನೂ ಕಾರಣಗಳನ್ನ ಕೊಡುತ್ತೀರಿ…ಕಾರಣಗಳು ಹುಟ್ಟುತ್ತಿದೆ ಅತ್ಯಾಚಾರ ಸಾಯುವವರೆಗೂ ಹುಟ್ಟುತ್ತಾನೆ ಇರುತ್ತದೆ …..
ಧೀರಜ್ ಬೆಳ್ಳಾರೆ