LATEST NEWS
ದಿನಕ್ಕೊಂದು ಕಥೆ- ವಸ್ತುಸ್ಥಿತಿ
ವಸ್ತುಸ್ಥಿತಿ
ನಿಮ್ಮ ಕೈಯಲ್ಲಿ ಮೊಬೈಲ್ ,ಮನೆಯಲ್ಲಿ ಟಿವಿ ಇದ್ದರೆ ಸಾಕು ಅದರೊಳಗೆ ಬರೋದೆಲ್ಲ ನಿಜ ಅಂದು ಅದನ್ನ ಹರಡಿ ಬಿಡ್ತೀರಾ?. ಪಕ್ಕದ ಮನೆಯ ಬಾಗಿಲು ತೆಗೆದು ನೋಡುವಷ್ಟು ವ್ಯವಧಾನವಿಲ್ಲ. ಯಾರೋ ಒಬ್ಬ ಒಂದು ಘಟನೆಯನ್ನು ಕೇಳಿ ಹಾಕಿರುವುದನ್ನು, ನೀವು ನಿಮ್ಮ ಕಣ್ಣಾರೆ ಕಂಡು ಬಂದಿರುವ ತರಹ ವಿವರಿಸುತ್ತೀರಾ!. ದೊಡ್ಡದೊಂದು ವಿಮರ್ಶ ಲೇಖನ ಬರೀತೀರ. ವಾಸ್ತವ ಸ್ಥಿತಿ ಅರಿತುಕೊಳ್ರೋ.. ನಾನೇನು ತಪ್ಪು ಮಾಡಿದೆ.
ಸ್ವಲ್ಪ ಸಮಯ ಆಯ್ತು ಆಹಾರ ತಲುಪಿಸೋಕೆ .ಅದಕ್ಕೆ ಒಂದಷ್ಟು ಮಾತುಕತೆಗಳು ಬೆಳೆದು ತಳ್ಳುವಿಕೆಯ ಪರಿಣಾಮ ಅವರಿಗೆ ಗಾಯವಾಗಿದೆ, ಅದನ್ನು ನಿಮ್ಮ ಮುಂದೆ ತೋಡಿಕೊಂಡಿದ್ದಾರೆ. ನೀವು ನನ್ನ ತಪ್ಪುಗಳನ್ನು ಪ್ರಚಾರ ಮಾಡಿದ್ದೀರಾ?. ತುಂಬಾ ಒಳ್ಳೆ ಕೆಲಸ. ನನ್ನ ಪರಿಸ್ಥಿತಿಯನ್ನು ಯೋಚಿಸಿದ್ದೀರಾ? ಅವರನ್ನು ತಳ್ಳಿ ಗಾಯಗೊಳಿಸುವ ಮೊದಲು ಅವರಿಂದ ನನಗಾದ ತೊಂದರೆ ಏನು ಅನ್ನೋದು ನಿಮಗೆ ಗೊತ್ತಿದಿಯಾ?.
ನನ್ನ ಮಾತು ಕೇಳಿದರೆ ನಂಬೋದು ಯಾರು ಅಲ್ವಾ ?.ನನ್ನ ಮನೆ ,ಊರಿಗೆ ನಿಜಸ್ಥಿತಿ ಹೇಳೋಕೆ ಆಗ್ತಿಲ್ಲ. ನಾನೊಬ್ಬ ಪೀಡಕ ನಂತೆ. ಮನೆಯಲ್ಲಿ ಮಗಳು ಮಾತನಾಡುತ್ತಿಲ್ಲ, ಹೆಂಡತಿ ಮನೆಗೆಲಸ ಯಾರೂ ಕೊಡ್ತಿಲ್ಲ. ನಾವು ಬದುಕಬೇಕು. ಸ್ವಲ್ಪ ಯೋಚಿಸಿ !ನಿಮ್ಮ ಅಭಿಪ್ರಾಯ ಹಂಚಿ ಅದೇನು ಸಂಭ್ರಮ ಪಡ್ತೀರೋ ನಾನರಿಯೆ… ಒಳ್ಳೆದಾಗಲಿ… ಎಲ್ಲರಿಗೂ ಒಳ್ಳೆದಾಗಲಿ…
ಧೀರಜ್ ಬೆಳ್ಳಾರೆ