Connect with us

LATEST NEWS

ದಿನಕ್ಕೊಂದು ಕಥೆ- ಮರೆತವರು

ಮರೆತವರು

ಅವರ ದುಡಿಮೆಯ ಬಗ್ಗೆ ನನಗರಿವಿಲ್ಲ. ಆದರೆ ಅವರು ನುಡಿಸಿದ ಪದಗಳು ರಾಗಗಳಾಗಿ ನಮ್ಮ ಕಿವಿಯಲ್ಲಿ ಇನ್ನೂ ಗುಂಯ್ ಗುಟ್ಟುತ್ತಿವೆ.ಮನಮೋಹಕ ಪದಪುಂಜಗಳು ಅರ್ಥವನ್ನು ಹೊತ್ತುಕೊಂಡು ಎದೆಗೂಡಿನಲ್ಲಿ ಭದ್ರವಾಗಿದೆ. ಸಾಹಿತ್ಯದ ಮುಕುಟದಲ್ಲಿ ತನ್ನದೂ ಒಂದು ರತ್ನದ ಹರಳು ಜೋಡಿಸಿ ಮೆರುಗು ನೀಡಿದ ಮಹಾನ್ ಚೇತನ ಅವರು.

ಜೀವನವನ್ನು ಕನ್ನಡದ ಸಾಹಿತ್ಯ ಬೆಳವಣಿಗೆಗೆ ಅರ್ಪಿಸಿದ ಭಗೀರತ. ಆ ದಿನ ಪೆನ್ನಿನ ಶಾಹಿ ಖಾಲಿಯಾಗಿ ಉಸಿರಿಲ್ಲದ ದೇಹ ಮನೆಯ ಚಾವಡಿಯಲ್ಲಿ ಅಸ್ತಂಗತವಾಯಿತು. ಬಂದು ನೋಡುವವರಿಲ್ಲ. ಸುದ್ದಿಯಾಗಲಿಲ್ಲ ,ನಾಲಗೆ ಚಪ್ಪರಿಸುವ CD ಒಂದರ ಸುದ್ಧಿ, ನಮ್ಮಲ್ಲೇ ಮೊದಲು ಅನ್ನುವ ಪೀಠಿಕೆಯೊಂದಿಗೆ ತೆವಲಿನ ಭರ್ಜರಿ ಪ್ರಚಾರ ನಡೆಯಿತು. ಅವರಿಗೊಂದು ನಮನ, ಕಿರುಪರಿಚಯ ,ಎಲ್ಲೂ ಕಂಡು ಬರಲೇ ಇಲ್ಲ.

ಥೂ ನಮ್ಮ ಜನ್ಮಕ್ಕೆ .ಮನೆಯಿಂದ ಮಸಣದವರೆಗೆ ನಡೆಯುವ ಪಾದಗಳ ಕೊರತೆಯುಂಟಾಯಿತು. ಅದೂ ಕೋಟಿಗಟ್ಟಲೆ ಮನುಷ್ಯರಿರುವ ಕರ್ನಾಟಕದಲ್ಲಿ .ಅಳುವವರು ಯಾರು?. ಕಳೆದುಕೊಂಡಿರುವುದು ಏನನ್ನು ಅನ್ನುವುದೇ ತಿಳಿಯದಿದ್ದಾಗ ದುಃಖವಾದರೂ ಹುಟ್ಟೋದು ಹೇಗೆ ?.ಆ ಚೇತನ ಎಷ್ಟು ನೋವು ಅನುಭವಿಸಿರಬಹುದು.

ಮೌನ ಪ್ರಾರ್ಥನೆ, ಒಂದು ನೆನಪು ಎಲ್ಲೂ ಕಾಣಲೇ ಇಲ್ಲ. ನಾವು ಹೀನರಾಗಿದ್ದೇವೆ .ವ್ಯರ್ಥ ವಿಚಾರಗಳಿಗೆ ಅರ್ಥ ನೀಡಿ ಪರಮಾರ್ಥವನ್ನು ಮರೆತು ಧಾವಂತದಲ್ಲಿ ಸಾಗುತ್ತಿದ್ದೇವೆ .ಕ್ಷಮಿಸಿಬಿಡಿ ಹಿರಿಯರೇ, ಲಕ್ಷ್ಮೀನಾರಾಯಣಭಟ್ಟರೇ….. ಅವರದೇ ಹಾಡು ಎಲ್ಲೋ ದೂರದಲ್ಲಿ ಕೇಳುತ್ತಿದೆ ,ಅವರಿಗೆ ಆಗಲೇ ಭವಿಷ್ಯದಲ್ಲಿ ಹೀಗಾಗುತ್ತದೆ ಅನ್ನೋದರ ಸೂಚನೆ ಸಿಕ್ಕಿತು ಅನ್ನಿಸುತ್ತಿದೆ .
ಹಿಂದೆ ಹೇಗೆ ಚಿಮ್ಮುತಿತ್ತು ಕಣ್ಣ ತುಂಬ ಪ್ರೀತಿ…
ಈಗ ಯಾಕೆ ಜ್ವಲಿಸುತಿದೆ ಏನೋ ಶಂಕೆ ಭೀತಿ….

ಧೀರಜ್ ಬೆಳ್ಳಾರೆ

Share Information
Continue Reading
Advertisement
Click to comment

Leave a Reply

Your email address will not be published. Required fields are marked *