LATEST NEWS
ದಿನಕ್ಕೊಂದು ಕಥೆ- ಆತ

ಆತ
ಮನೆ ಮೌನವಾಗಿದೆ. ಮನಸ್ಸು ಅಳುತ್ತಿದೆ. ಅಪ್ಪ ಉಸಿರು ನಿಲ್ಲಿಸಿದ್ದಾನೆ. ಹೊಟ್ಟೆಯೊಳಗೆ ಅನ್ನ ಇಳಿಯುವುದು ಹೇಗೆ?. ಅಲ್ಲಲ್ಲ ಮನೆಯೊಳಗೆ ಅನ್ನ ಬೇಯೋದಾದರೂ ಹೇಗೆ?. ಸೂರ್ಯ ಏಳುವ ಮೊದಲೇ ಮನೆ ಬಿಡುತ್ತಿದ್ದ ಅಪ್ಪ ಮನೆಮನೆಗೆ ತೆರಳಿ ಗುಜರಿ ಸಂಗ್ರಹಿಸುತ್ತಿದ್ದ.
ಚಿಲ್ಲರೆಗಳೊಂದಿಗೆ ಮನೆಗೆ ಬಂದು ಆ ದಿನವನ್ನ ಮುಗಿಸುತ್ತಿದ್ದ. ಸೂರ್ಯ ಮುಳುಗುವಾಗ ಮನೆಯೊಳಗೆ ಕಾಲಿರಿಸಿ ಉಸಿರು ಚೆಲ್ಲುತ್ತಿದ್ದ .ಕೆಲವೊಮ್ಮೆ ಗೋಣಿ ತುಂಬಿದರೆ ಹಲವುಸಲ ಗೋಣಿ ಖಾಲಿಯಾಗಿ ಬರುತ್ತಿತ್ತು .ಇನ್ನು ಮುಂದೆ ಸೂರ್ಯ ಎದ್ದರೂ ,ಮಲಗಿದ್ದರು ಅಪ್ಪ ಬರೋದಿಲ್ಲ. ಮನೆಯಲ್ಲಿ ಒಲೆ ಉರಿಯ ಬೇಕಾದರೆ ನಾನು ದುಡಿಯಲೇಬೇಕು. ನಾನೊಬ್ಬನೇ ಗಂಡು ದಿಕ್ಕು ಮನೆಗೆ. ಓದಿನ ಪುಸ್ತಕವ ಬದಿಗಿರಿಸಿ ಗೋಣಿ ಹೆಗಲಿಗೇರಿಸಿ ಹೊರಟೆ.

ಅಭ್ಯಾಸವಿಲ್ಲದ ಕೆಲಸವನ್ನು ಹೊಟ್ಟೆ ಸುಲಭವಾಗಿ ಕಲಿಸಿತು .ನಷ್ಟಗಳಿಂದ ಲಾಭವನ್ನು ಕಲಿತೆ. ಆಯಾಸದ ಪರಿಹಾರಕ್ಕಾಗಿ ನೆರಳಿನ ಆಶ್ರಯಿಸಿದಾಗ ಗುಜರಿಯ ಪೇಪರ್ನ ಅಕ್ಷರಗಳು ಆಕರ್ಷಿಸಿದವು .ಓದಿದೆ ಅಲ್ಲಿಂದ ಪುಸ್ತಕ ಆಪ್ತನಾಯಿತು. ಯಾಕೋ ಓದಿಗಾದರೂ ಗುಜರಿ ಹೋಗುತ್ತಿದ್ದೆ. ಹಲವು ಪುಸ್ತಕಗಳ ಓದಿನಿಂದ ಜ್ಞಾನ ಹೆಚ್ಚಾದವು. ಆಲೋಚನೆ ಗುಜರಿಯೊಂದಿಗೆ ಬೆಳೆಯಿತು. ನನ್ನಲ್ಲಿ ಹಣವಿಲ್ಲ ,ಶಾಲಾ-ಕಾಲೇಜಿನ ಮುಖವೇ ನೋಡಿಲ್ಲ.
ನೋಡುವ ಮನಸ್ಸು ಇಲ್ಲ. ದುಡ್ಡು ಕೆಲಸದ ನಿಭಾಯಿಸುವ ಶಕ್ತಿ ಇದೆ. ನನ್ನನ್ನ ಯವುದೋ ಒಂದು ದೊಡ್ಡ ಕಂಪೆನಿ ಅವರು ನಂಬುವುದು ಹೇಗೆ ,ಕೆಲಸ ಪಡೆಯುವುವುದು ಹೇಗೆ?. ಗೊಂದಲದ ಮನಸ್ಸಿನಲ್ಲಿ ಮತ್ತೆ ಗೋಣಿ ಹೆಗಲಿಗೇರಿಸಿ ತೇನೆ ಉತ್ತರಕ್ಕಾಗಿ ಹೊರಟೆ. ಖಾಲಿ ಹಾಳೆಗಳ ಹಲವು ಪುಟಗಳು ಕಾಲಿವೆ. ತುಂಬಿಸೋರಿಲ್ಲದೆ ಗೆದ್ದಲು ಹಿಡಿಯುಬಹುದೆಂಬ ಭಯವಿದೆ.
ಧೀರಜ್ ಬೆಳ್ಳಾರೆ