LATEST NEWS
ದಿನಕ್ಕೊಂದು ಕಥೆ- ಕಾರ್ಯಕ್ರಮ

ಕಾರ್ಯಕ್ರಮ
ಕಾರ್ಯಕ್ರಮ ಆಯೋಜನೆಯಾಗಿತ್ತು .ದುಡ್ಡು ಹರಿದುಬಂದಿತ್ತು. ಸಮೂಹಮಾಧ್ಯಮಗಳು ಹೊಸ ವೇದಿಕೆಯನ್ನು ಕಲ್ಪಿಸಿದ್ದವು. ರಾಜ್ಯದ ಮೂಲೆಮೂಲೆಗೂ ಸುದ್ದಿ ತಲುಪಿತು. ಸ್ಪರ್ಧಿಗಳು ಸಾವಿರ ಸಂಖ್ಯೆಯಲ್ಲಿ ನೋಂದಾಯಿಸಿದರು, ಕಾರ್ಯಕ್ರಮದ ಹಿಂದಿನ ದಿನದವರೆಗೆ ಆಯೋಜಕರ ಭಾಷಣಗಳು ನಿಯಮಗಳ ಪಟ್ಟಿಗಳು ಬೆಳೆಯುತ್ತಲೇ ಇದ್ದವು.
ಸ್ಥಳ ಮತ್ತು ವೇಳಾಪಟ್ಟಿ ಹಂಚಿಕೆ ಆಯಿತು. ಮುಂಜಾನೆ 9ಕ್ಕೆ ದೀಪಬೆಳಗಿಸಿ ಸಾಂಕೇತಿಕ ಉದ್ಘಾಟನೆ ಮತ್ತು ಕಾರ್ಯಕ್ರಮ ಆರಂಭ ಎಂಬ ಉದ್ಘೋಷ ಹೊರಬಿತ್ತು. ಹನ್ನೆರಡಾದರೂ ಯಾರದ್ದೋ ಪುಣ್ಯಕ್ಕೆ ಉದ್ಘಾಟನೆಯ ಚಪ್ಪಾಳೆಗಳು ಕೇಳಿಬಂತು. ಸ್ಪರ್ಧಾ ತೀರ್ಪುಗಾರರ ಗಡಿಯಾರ ಸಮಯವನ್ನೇ ತೋರಿಸುತ್ತಿಲ್ಲ.

ನಿರೂಪಕರು ಮತ್ತು ಸ್ಪರ್ಧಾಳುಗಳ ಮಧ್ಯೆ ಆಯೋಜಕರ ವಿನೂತನ ಕಾರ್ಯಕ್ರಮ ,ಓಡಾ.ಟ,ಅನಗತ್ಯ ಸನ್ಮಾನಗಳು. ಸಮಯ ಮೀರಿತ್ತು ಸೂರ್ಯ ಮನೆಗೆ ತೆರಳಿ ಮಲಗಿದ್ದ. ವಿದ್ಯಾರ್ಥಿಗಳಿಗೆ ಮನೆಯಲ್ಲಿ ಕಾಯುತ್ತಿದ್ದೆ. ಆಯೋಜಕರು ಉತ್ತರಿಸುತ್ತಿಲ್ಲ .ಕಾರ್ಯಕ್ರಮಕ್ಕೆ ಬಿಟ್ಟು ಜನ ಹೊರಟ,ರು ಕೆಲವರು ಉಳಿದುಬಿಟ್ಟರು.
ಕತ್ತಲು ದಾರಿ ತೋರಿಸುತ್ತಿಲ್ಲ ,ಮನೆಯವರು ಆಗಮಿಸಿದರು, ನಿರಾಶೆಯ ಮೋಡ ಕಪ್ಪಾಯಿತು. ಬೀಸುವ ಗಾಳಿಗೆ ಆಕಾಶ ಕಾಯುತ್ತಿತ್ತು ಆಯೋಜಕರು ಹೊಸ ಕಾರು ಖರೀದಿಸಿದರು ಮನೆಯ ಮೇಲೊಂದು ಮನೆಯ ಕಟ್ಟಿಸಿದರು …
ಧೀರಜ್ ಬೆಳ್ಳಾರೆ