LATEST NEWS
ದಿನದಕ್ಕೊಂದು ಕಥೆ- ರೇ….
ರೇ….
ನನ್ನ ಆತ್ಮಕ್ಕೆ ಆಗಾಗ ರೇಗುವ ರೋಗದ ರಾಗವನ್ನು ದಯಪಾಲಿಸುತ್ತಲೇ ಇರುತ್ತೇನೆ. ನಾನು ಸಾಗುವ ದಾರಿಯಲ್ಲಿ ನೆಲ ನುಣುಪಾಗಿದೆ, ಅಷ್ಟೇನು ಅಡೆತಡೆಗಳಿಲ್ಲ. ಆದರೆ ನಾನೇ ಸೃಷ್ಟಿಸಿಕೊಂಡ ಒಂದಷ್ಟು ತೊಡಕುಗಳಿದೆ. ನಿಜ ನಾನೇ ಸೃಷ್ಟಿಸಿಕೊಂಡಿದ್ದು. ಅದಕ್ಕೊಂದು ಹೆಸರು ಕೊಡದಿದ್ದರೆ ನಿಮಗೆ ಪರಿಚಯ ಆಗುವುದು ಹೇಗೆ.
“ರೇ… “ಇದೇ ಅವನ ಹೆಸರು ನಾವೆಲ್ಲ ಸೇರಿ ಇಟ್ಟ ಹೆಸರು. ನನ್ನ ಉಚ್ಚ್ವಾಸ-ನಿಶ್ವಾಸಗಳ ವೇಗದಲ್ಲಿ ಬರ್ತಾನೆ. ಸಮಯವನ್ನ ತಿಂದಿದ್ದಾನೆ, ಬದುಕಿನ ದಿಕ್ಕನ್ನೇ ಬದಲಿಸಿದ್ದಾನೆ. ರೇ… ಇದ್ದಾನಲ್ಲ ಅವನ ಗೋಜಿಗೆ ಬಿದ್ದರೆ ಕೆಲಸಗಳನ್ನು ಒಂದಿಷ್ಟು ತಪ್ಪಿಸಬಹುದು. ಇದರಲ್ಲಿ ನಾನು ಗೆಲ್ಲದಿದ್ದರೆ ,ಅವಳು ಮಾತನಾಡಿಸದಿದ್ದರೆ, ಹೇಳಿದ ಹಾಗೆ ನಡೆಯದಿದ್ದರೆ, ತಿನ್ನದಿದ್ದರೆ, ಸಿಗದಿದ್ದರೆ, ನಗದಿದ್ದರೆ, ಬರೆಯದಿದ್ದರೆ, ಕೊಡದಿದ್ದರೆ, ಉಳಿಯದಿದ್ದರೆ, ಒಪ್ಪದಿದ್ದರೆ, ತಲುಪದಿದ್ದರೆ, ಹೀಗಿದ್ದರೆ, ಹಾಗಿದ್ದರೆ ಹೀಗೆ ಪಟ್ಟಿ ಬೆಳೆಯುತ್ತಲೇ ಇರುತ್ತದೆ ಹನುಮಂತನ ಬಾಲದ ಹಾಗೆ.
ಎಲ್ಲರ ಜೊತೆ ಸುಲಭವಾಗಿ ಸೇರಿಕೊಂಡು ನಗುನಗುತ್ತಾ ನಮ್ಮೊಳಗೊಬ್ಬನಾಗಿ ಬಿಡುತ್ತಾನೆ. “ನಂಬಿಕೆ” ಎಲ್ಲಾದರೂ ಬಂದುಬಿಟ್ಟರೆ ಓಡಿಹೋಗುತ್ತಾನೆ. ಆ ಹುಡುಗ ಛತ್ರಿ ತಂದನಲ್ಲ ಹಾಗೆ. ಅಂತಹ ನಂಬಿಕೆ ಇದ್ದಾಗ ” ರೆ “ತೊರೆದು ಚಲಿಸುತ್ತಾನೆ. ಹುಡುಗನ ಕತೆ ನಿಮಗೆ ಗೊತ್ತಿದ್ದರೆ ಒಳಿತು, ಇಲ್ಲವಾದರೆ ಕರೆ ಮಾಡಿ ನಾನೇ ಹೇಳುತ್ತೇನೆ 88 61 1934 54 . ರೇ.. ಇದ್ದಾನಲ್ಲ ಅವನನ್ನ ಹತ್ತಿರ ಸೇರಿಸಬೇಡಿ. ವರ್ತಮಾನ ಭೂತಕಾಲದೊಳಕ್ಕೆ ಸೇರಿ ಭವಿಷ್ಯ ಖಂಡಿತ ಕತ್ತಲಾಗುತ್ತದೆ .
ಧೀರಜ್ ಬೆಳ್ಳಾರೆ