Connect with us

LATEST NEWS

ದಿನಕ್ಕೊಂದು ಕಥೆ- ಬೆಳಕು

ಬೆಳಕು

ಕತ್ತಲೆಯ ದಾರಿಯಲ್ಲಿ ನಡೆಯುತ್ತಿದ್ದೆ. ದಾರಿಗೆ ಬೆಳಕಿರಲಿಲ್ಲ. ಆಕಾಶಕ್ಕೆ ಇಣುಕಿದಾಗ ಚಂದ್ರನ ಸುಳಿವೇ ಇಲ್ಲ. ಆದರೂ ಬೆಳಕು ಮೋಡಗಳಿಗೆ ದಾರಿ ತೋರಿಸುತ್ತಿದೆ .ಆ ಬೆಳಕಿನ ಹುಟ್ಟು ತಿಳಿಯುತ್ತಿಲ್ಲ. ಅದಕ್ಕೆ ಎಷ್ಟು ಹುಡುಕಿದರೂ ಕಾಣಲಿಲ್ಲ. ಅಲ್ಲ ಆ ಮೋಡ ಈ ಊರಿಂದ ಇನ್ನೊಂದು ಊರಿಗೆ ಹೋಗಲು ಯಾವುದೂ ಬೆಳಕು ದಾರಿ ಮಾಡಿಕೊಡುತ್ತಿದೆ.

ನನ್ನ ಬೆಳಕು ನನ್ನಲ್ಲಿ ಉಳಿದು ಬಿಡಲಿ ಎಂದು ಅದು ಅಲ್ಲಿಯೇ ಕುಳಿತು ಬಿಡಲಿಲ್ಲ, ಬೆಳಕು ವ್ಯರ್ಥವಾಗುತ್ತದೆ ಎನ್ನುವ ದುರಾಲೋಚನೆಯೂ ಇಲ್ಲ . ದಾರಿ ತೋರಿಸುತ್ತಿದೆ. ಇಲ್ಲದಿದ್ದರೆ

ಮೋಡಗಳು ಅಲ್ಲೇ ಗುದ್ದಿ ಮಳೆ ಮತ್ತೆ ಇದೇ ಊರಿಗೆ ಸುರಿಯುತ್ತಿತ್ತು. ಪಕ್ಕದೂರಿನ ಗದ್ದೆಯಲ್ಲಿನ ಪೈರಿನ ಬಾಯಾರಿಕೆ ನೀಗುತ್ತಿರಲಿಲ್ಲ .ಬೆಳಕಿನ ಆ ಗುಣ ನನ್ನೊಳಗೂ ಸ್ವಲ್ಪ ಚಿಗುರಿ ಮರವಾಗಲಿ ಎಂದು ಕೈಮುಗಿದು ಬೆಳಕ ಪ್ರಾರ್ಥಿಸಿದೆ…

ಧೀರಜ್ ಬೆಳ್ಳಾರೆ

Share Information
Continue Reading
Advertisement
Click to comment

Leave a Reply

Your email address will not be published. Required fields are marked *