LATEST NEWS
ದಿನಕ್ಕೊಂದು ಕಥೆ- ಮಗಳ ಕನಸು
ಮಗಳ ಕನಸು
ಮಳೆ ಭೂಮಿಗಿಂದು ಸುರಿಯಬಾರದು ಎಂದು ನಿರ್ಧರಿಸಿದ್ದರೂ, ಗಾಳಿ ಬಿಡುತ್ತಾ ಇಲ್ಲ.
ಮೋಡಗಳಿಗೆ ಜಗಳವಾಡಿಸಿ ನೀರು ಸುರಿಸಿಯೇ ಬಿಟ್ಟಿತ್ತು. ಮಳೆಹನಿ ಬೇಸರದಿ ಆ ಬೀದಿಯ ಮೇಲೂ ಸುರಿಯಲಾರಂಭಿಸಿತು. ಮಳೆಗೆ ಅಳು ಬಂದದ್ದು ತಾ ಮಾಡಿದ ಕಾರ್ಯಕ್ಕೆ. ಅಲ್ಲಿ ಆ ಬೀದಿಯ ಪೇಟೆಯಲ್ಲಿ ಅವನು ಪ್ಲಾಸ್ಟಿಕ್ ಗೊಂಬೆಗಳಿಗೆ ಗಾಳಿ ಊದಿ ಮಾರಾಟ ಮಾಡುತ್ತಿದ್ದಾನೆ.
ಬಿಸಿಲಿದ್ದ ಕಾರಣ ಮಾರಾಟದ ಬಿಸಿ ತಟ್ಟಿತ್ತು. ಬಣ್ಣ ದೂರದವರೆಗೆ ಕಾಣುತ್ತಿದ್ದರಿಂದ ಹತ್ತಿರ ಬಂದು ಒಂದಷ್ಟು ಜನ ಖರೀದಿಸುತ್ತಿದ್ದರು. ಆದರೆ ಮಳೆಹನಿಯ ಲಾರಂಭಿಸಿದೆ. ಎಲ್ಲರೂ ಬಿಸಿಯ ಕಡೆಗೆ ಓಡಿದರು. ಖರೀದಿಸುವ ಬಗ್ಗೆ ಗಮನ ಕೊಡುತ್ತಿಲ್ಲ .
ಮರುದಿನ ತನ್ನ ಮಗಳ ಹುಟ್ಟಿದ ಹಬ್ಬವಾದ್ದರಿಂದ ಇಂದು ಸಂಜೆ ಅವಳಿಗೆ ಬಟ್ಟೆ ಕೊಡಿಸುತ್ತೇನೆಂದು ಕರೆದುಕೊಂಡು ಬಂದಿದ್ದ .ಗೊಂಬೆ ಮಾರಾಟವಾಗದೆ ದುಡ್ಡು ಕೈಗೆ ಸೇರಲಿಲ್ಲ. ಅವಳ ಕನಸಿಗೆ ಮಳೆನೀರ ಎರಚಿತು.ಅವಳಿಗೆ ಕೊಡೆಹಿಡಿದು ಮಳೆಯೊಂದಿಗೆ ಇಳಿಯುತ್ತಿದ್ದ ತನ್ನ ಕಣ್ಣೀರನ್ನು ಒರೆಸಿ ಮತ್ತೆ ಮತ್ತೆ ಜೋರಾಗಿ ಕೂಗುತ್ತಿದ್ದಾನೆ. ಆತನಿಗೆ ತನ್ನ ಹಸಿವಿನ ಯೋಚನೆಯಿಲ್ಲ. ಮಗಳ ಕನಸಿನ ಯೋಜನೆಯಷ್ಟೇ….
ಧೀರಜ್ ಬೆಳ್ಳಾರೆ