LATEST NEWS
ದಿನಕ್ಕೊಂದು ಕಥೆ- ಬೇಡುವಿಕೆ?
ಬೇಡುವಿಕೆ?
ಅವನದು ದಿನಚರಿಯೇ ಇದು. ವಯಸ್ಸಿನ್ನೂ ಸಣ್ಣದು. ಬೆಟ್ಟದ ಮೇಲಿನ ಶಿವನಿಗೆ ಬೆಟ್ಟವೇರುತ್ತಾ ಸುತ್ತಮುತ್ತಲೆಲ್ಲಾ ಹೂವನ್ನು ಆರಿಸಿ ಅವನ ಲಿಂಗದ ಮುಂದೆ ಇಟ್ಟು ಬರುತ್ತಾನೆ. ಬಿಸಿಲು ಗಾಳಿಗೆ ಅವನ ಕೆಲಸ ನಿಂತಿಲ್ಲ. ನಾನೊಮ್ಮೆ ಕೇಳಿದ್ದಕ್ಕೆ “ಬಿಸಿಲು ಬೆವರು ತರಿಸುತ್ತದೆ, ಏನು ಮಾಡೋದು.
ನನ್ನ ಶಿವನಿಗೆ ಹೂ ಕೊಡಬೇಕಲ್ಲಾ, ನನಗೆ ನನ್ನ ಶಿವನ ಬಗ್ಗೆ , ಕೋಪ ಇದೆ. ನಾನಿಷ್ಟು ದಿನ ಕೊಟ್ರು ಒಂದು ದಿನವೂ ಅದನ್ನ ಪಡೆದು ಮುಡಿದಿಲ್ಲ. ಅದಕ್ಕೆ ಅಲ್ಲೇ ಇಟ್ಟು ಬರುತ್ತೇನೆ. ಈ ಕಾರ್ಯ ಮುಂದುವರೆಯುತ್ತಲೇ ಇರುತ್ತದೆ. ಅವನು ಪಡೆದು ಮುಡಿಯುವವರೆಗೂ. ಅಲ್ಲಿವರೆಗೂ ನನ್ನ ಶಿವ ನನಗಿಷ್ಟವಿಲ್ಲ .”
ಅಬ್ಬಾ ಎಂತಹ ಮಾತು. ನಾವು ಸಿಗದಿದ್ದರೆ ಜೋರಾಗಿ ಅಳುತ್ತೇವೆ, ಬೇಸರಿಸುತ್ತೇವೆ ಆದರಿವನು ನಿಲ್ಲಿಸುತ್ತಿಲ್ಲ, ಅಲ್ಲೇ ನಿಂತು ರಚ್ಚೆ ಹಿಡಿದು ಬೇಡುತ್ತಿಲ್ಲ. ಇಟ್ಟು ತೆರಳುತ್ತಿದ್ದಾನೆ. ಇದೊಂದು ಭಾವ ನನ್ನೊಳಗಿಳಿಯಬೇಕಿದೆ. ಕೇಳೋಣ ಒಮ್ಮೆ. ಸಿಗುವುದಿಲ್ಲವೋ ಬಿಟ್ಟು ತೆರಳೋಣ. ಅಲ್ಲಿ ರಚ್ಚೆ ಹಿಡಿದು ಬೇಡುವುದು ಯಾಕೆ? ನನಗೆ ಸಿಗುವುದಾದರೆ ಖಂಡಿತ
ಸಿಗುತ್ತದೆ ಅಲ್ವಾ?
ಧೀರಜ್ ಬೆಳ್ಳಾರೆ