LATEST NEWS
ದಿನಕ್ಕೊಂದು ಕಥೆ- ಸಾರ್ಥಕ್ಯ
ಸಾರ್ಥಕ್ಯ
ಈ ಲಾಕ್ ಡೌನ್ ಮನೆಯೊಳಗೆ ಇರೋಕೆ ಹೇಳಿದ್ದರಿಂದ ಮನೆಯ ಅಂಗಳದಲ್ಲಿ ತರಕಾರಿ ಬೆಳೆಸುವ ಯೋಚನೆ ಮಾಡಿದೆ. ಅಲ್ಲಿ ಖುಷಿ ಇತ್ತು, ಶ್ರಮದ ಬೆವರು ನೆಲಕ್ಕಿಳಿದಾಗ ನೆಮ್ಮದಿ ಸಿಗುತ್ತಿತ್ತು. ಬೀಜ ನೆಲದೊಳಕ್ಕೆ ಇಳಿದ ಕೂಡಲೇ ಗಿಡ ಮೇಲೇಳುವುದಿಲ್ಲವಲ್ಲ ಹಾಗಾಗಿ ನನ್ನ ಬೇಟಿ ಆ ಜಾಗಕ್ಕೆ ದಿನವೂ ಸಾಗುತ್ತಿತ್ತು.
ಅದನ್ನ ಗಮನಿಸುತ್ತಾ ಸಣ್ಣ ಕಳೆ ಗಿಡಗಳು ಬೆಳೆದಾಗ ಅದನ್ನ ಕೀಳುತ್ತಾ ಅದರ ಜೊತೆಗೆ ಬಾಂಧವ್ಯ ಬೆಳೆಸಿದೆ .ದಿನಕಳೆದಂತೆ ಚಿಗುರು ನನ್ನ ಮುಖವನ್ನು ನೋಡಲು ಮೇಲೆದ್ದು ಬಂದಿತ್ತು. ಬೆಳೆಯುತ್ತಾ ಬೆಳೆಯುತ್ತಾ ಹೂವು ಹಣ್ಣು ಬಿಡೋಕೆ ತಯಾರಿ ಆರಂಭವಾಯಿತು. ಇನ್ನೇನು ಫಲ ನೀಡುತ್ತದೆ ಅನ್ನುವಾಗ ಅದು ನೀರು ಗೊಬ್ಬರವನ್ನು ಸರಿಯಾಗಿ ಪಡೆದುಕೊಳ್ಳಲಿಲ್ಲವೋ ಅಥವಾ ಯಾವುದೋ ಕ್ರಿಮಿಕೀಟ ಹೊರಗಿನಿಂದ ಆಕ್ರಮಣ ಮಾಡಿದ್ದು ಗೊತ್ತಿಲ್ಲ.
ತನ್ನನ್ನೇ ತಾನು ಅವನತಿಯ ಕಡೆಗೆ ಕೊಂಡೊಯ್ಯುತ್ತಿತ್ತು. ನಾನ್ ಎಷ್ಟೇ ಪ್ರಯತ್ನಪಟ್ಟರೂ ಉಳಿಸೋಕೆ ಸಾಧ್ಯವಾಗಿಲ್ಲ .
ಹಸಿರಾಗಿ ಇದ್ದದ್ದು ಒಣಗಿ ಸತ್ತುಹೋಯಿತು. ಆ ದಿನ ತುಂಬಾ ನೋವಾಯ್ತು. ನಾ ಬೆಳೆಸಿದ ಗಿಡವನ್ನು ಉಳಿಸಿಕೊಳ್ಳಲಾಗಲಿಲ್ಲ, ಹೊರಗಿನ ಕ್ರಿಮಿಗಳ ಆಕ್ರಮಣದಿಂದ ಬಲಿಯಾಯಿತು ಅನ್ನುವ ಯೋಚನೆಯಲ್ಲಿರುವ ಆಗಲೇ ನನಗನಿಸಿದ್ದು, ನಮ್ಮನ್ನ ಈ ಭೂಮಿಗೆ ಸಾಧಿಸಲೆಂದು ತುಂಬಾ ಕಷ್ಟ ಪಟ್ಟು ರೂಪಿಸಿದ ಭಗವಂತನಿಗೆ ನಾವು ಸಾಧನೆ ಮಾಡದೆ ನಮ್ಮೊಳಗಿನ ಆಮಿಷಗಳಿಗೆ ಹೊರಗಿನ ಆಸೆಗಳಿಗೆ ಬಲಿಯಾಗಿ ಏನು ಮಾಡದೆ ವ್ಯರ್ಥ ಕಾಲಹರಣ ಮಾಡಿ ನಮ್ಮ ಅವನತಿಯನ್ನ ನಾವೇ ಮಾಡುತ್ತಿರುವಾಗ ಅವನಿಗೆ ಎಷ್ಟು ನೋವು ಆಗಿರಬಹುದು ಅಂತ .ಹಾಗಾಗಿ ನಾನು ಹುಟ್ಟನ್ನು ಸಾರ್ಥಕ್ಯ ಮಾಡಿಕೊಳ್ಳಬೇಕು ಅಲ್ವಾ….