LATEST NEWS
ದಿನಕ್ಕೊಂದು ಕಥೆ- ದಾಟಿಸಬೇಕಾಗಿದೆ

ದಾಟಿಸಬೇಕಾಗಿದೆ
ಇಲ್ಲ ನನಗೊಂದು ಮಂತ್ರದ ಅವಶ್ಯಕತೆ ಇದೆ. ತುಂಬಾ ತುರ್ತಾಗಿ ಬೇಕಾಗಿದೆ. ಎಲ್ಲೂ ಸಿಕ್ತಾ ಇಲ್ಲ. ನಿಮಗೆ ಗೊತ್ತಿದ್ದರೆ ತಿಳಿಸುತ್ತೀರಾ?. ಯಾವ ಮಂತ್ರ ಅಂತನಾ… ಯಾವ ಮಂತ್ರವನ್ನು ನಾನು ಹೇಳಿ ಈ ನೋವು ದುಃಖ ಕಷ್ಟ ಇರುತ್ತದಲ್ಲಾ ಅದನ್ನ ಬೇರೆ ಎಲ್ಲಿಗಾದರೂ ವರ್ಗಾಯಿಸಲಿಕ್ಕೆ ಅಥವಾ ಸಾಗಿಸಲಿಕ್ಕೆ ಅಥವಾ ಮಾಯ ಮಾಡಲಿಕ್ಕೆ ಸಾಧ್ಯವಾಗುವಂಥದ್ದು. ಸಿಗಬಹುದಾ ?.
ಯಾಕೆಂದರೆ ನಾನು ನೋಡುತ್ತಿರುವ ,ಕೇಳುತ್ತಿರುವ , ಬದುಕುಗಳಲ್ಲಿ ನೋವುಗಳನ್ನ ಕಷ್ಟಗಳನ್ನು ಅನುಭವಿಸೋಕೆ ಕಷ್ಟ ಪಡುತ್ತಿರುವುದನ್ನು ಕಾಣುತ್ತಿರುವಾಗ ಹೀಗೆ ಅನಿಸುತ್ತೆ. ಅವರಿಂದ ಅದನ್ನು ಅನುಭವಿಸೋಕೆ ಸಾದ್ಯವಾಗ್ತಾ ಇಲ್ಲ. ಅದನ್ನ ಪೂರ್ತಿ ಅಲ್ಲದಿದ್ದರೂ ಸ್ವಲ್ಪನಾದರೂ ಎಲ್ಲಿಗಾದರೂ ದಾಟಿಸೋಕೆ ಅಥವಾ ಮಾಯ ಮಾಡುವಂತಹ ಮಂತ್ರ ನಿಮಗೆ ತಿಳಿದಿದೆಯಾ?.

ನನಗೆ ಮಂತ್ರ ಗೊತ್ತಾದ್ರೆ ನನ್ನ ವೈಯಕ್ತಿಕ ವಿಚಾರಗಳಿಗೆ ಖಂಡಿತ ಬಳಸುವುದಿಲ್ಲ. ನಾನು ಖುದ್ದಾಗಿ ಪರಿಶೀಲಿಸಿ ಅದನ್ನು ಪ್ರಯೋಗಿಸುತ್ತೇನೆ. ಇದನ್ನೇ ಕೆಲಸವಾಗಿ ಬೇಕಾದರೂ ಮಾಡುತ್ತೇನೆ. ಸಿಕ್ಕರೆ ತಿಳಿಸಿ. ಮಂತ್ರ ಒಂದು ಅಗತ್ಯವಾಗಿ ಬೇಕಾಗಿದೆ, ಕಣ್ಣೀರನ್ನ ಕಡಿಮೆ ಮಾಡಲು, ಒಂದಷ್ಟು ನೋವುಗಳಿಗೆ ಮುಕ್ತಿ ನೀಡಲು, ತಿಳಿಸಿ ನಾನಲ್ಲಿಗೆ ಬಂದು ಕಲಿಯುತ್ತೇನೆ.ತಿಳಿಸುತ್ತೀರಾ ಅಲ್ವಾ ????
ಧೀರಜ್ ಬೆಳ್ಳಾರೆ