LATEST NEWS
ದಿನಕ್ಕೊಂದು ಕಥೆ- ನಡೆಯುತ್ತಾನೆ
ನಡೆಯುತ್ತಾನೆ
ಎಲ್ಲವೂ ಸ್ಥಗಿತಗೊಳ್ಳುವ ಘೋಷಣೆ ಹೊರಬಿತ್ತು. ಹಲವು ಭಯದ ಮುಖಗಳಲ್ಲಿ ರಾಜೀವನದೊಂದು. ಮನೆಯಿಂದ 30 ಕಿಲೋಮೀಟರ್ ದೂರದಲ್ಲಿ ವಹಿಸಿಕೊಂಡ ಕೆಲಸ. ಮನೆಯೊಳಗೆ ಕುಳಿತರೆ ಬದುಕು ದುಸ್ತರ ಎಂದು ತಿಳಿದಾಗ ಕೆಲಸಕ್ಕೆ ಹೋಗುವ ನಿರ್ಧಾರ ಬಲವಾಯಿತು.
ತಲುಪುವುದು ಹೇಗೆ ಸ್ವಂತ ಗಾಡಿ ಇಲ್ಲ, ಅಲ್ಲಿಗೆ ಹೋಗುವ ವ್ಯವಸ್ಥೆಯೂ ಇಲ್ಲ ,ರೋಗದ ಭಯವೆಂದು ಮನೆಯೊಳಗೆ ಕುಳಿತರೆ ಹಸಿವು ಆಕ್ರಮಿಸುವುದು ಖಂಡಿತಾ. ಸಿಕ್ಕ ಗಾಡಿಗೆ ಕೈತೋರಿಸಿ ಕೆಲಸದ ಜಾಗ ತಲುಪುತ್ತಾನೆ . ತಿರುಗಿ ಮನೆ ಸೇರುವುದೇ ಕಷ್ಟವಾಗುತ್ತಿದೆ. ಪಾದಗಳು ಅಷ್ಟೂ ಕಿಲೋಮೀಟರನ್ನ ಕ್ರಮಿಸಿ ಮನೆ ತಲುಪುತ್ತಿದ್ದಾವೆ.
ಎಲ್ಲರೂ ಒಳಗಿದ್ದಾರೆ. ಆತ ಇನ್ನು ಹೊರಡುತ್ತಲೇ ಇದ್ದಾನೆ. ದೂರದೂರಿನ ಕೆಲಸಕ್ಕೆ ಹೊರಡುವ ಧೈರ್ಯವಿದೆ ಕಾಲಿನಲ್ಲಿ ತ್ರಾಣವಿದೆ. ಮನೆಯೊಳಗಿನ ಜೀವಗಳ ಉಳಿವಿಗೆ ನಡೆಯುತ್ತಾನೆ ದೂರ . ನಂಬಿದ ಜೀವಗಳನ್ನು ದಡ ಸೇರಿಸಬೇಕಾದರೆ ನಡೆಯಲೇಬೇಕು, ರೋಗ ಯಾವಾಗ ಆಕ್ರಮಿಸಿ ಮತ್ತೆ ಮನೆ ಸೇರದ ಹಾಗೆ ಮಾಡುತ್ತೋ ಗೊತ್ತಿಲ್ಲ. ಭಯವಿದ್ದರೂ ನಡೆದಿದ್ದಾನೆ, ಜೀವನ ನಡೆಯಬೇಕಲ್ಲ ….
ಧೀರಜ್ ಬೆಳ್ಳಾರೆ