LATEST NEWS
ದಿನಕ್ಕೊಂದು ಕಥೆ- ಮಳೆ

ಮಳೆ
ಕೊಳದಲ್ಲಿದ್ದ ತಾವರೆಯ ಎಲೆ ಮೇಲೆ ಕುಳಿತಿದ್ದ ನೀರ ಹನಿಗಳು ಕಂಪಿಸುತ್ತಿದ್ದವು. ಗುಡುಗಿನ ಅಬ್ಬರ ಜೋರಾಗಿದೆ .ಬಾನು ಅಳುತ್ತಿದೆ ನಿಲ್ಲಿಸುವ ಯಾವ ಸೂಚನೆಯೂ ನೀಡುತ್ತಿಲ್ಲ. ಬಾನಿಗೆ ತುಂಬಾ ದುಃಖವಾಗಿದೆ.ಸಂಜೆ ಅಪ್ಪ ಕೆಲಸದಿಂದ ಬಂದು ಕೂಡಲೇ “ಅಪ್ಪ ಕೇರಳದಲ್ಲಿ ತುಂಬಾ ಜೋರು ಮಳೆಯಂತೆ .ಸಮುದ್ರತೀರದಲ್ಲಿ ದೊಡ್ಡ ಅಲೆ ಎದ್ದಿದೆ.
ಎರಡು,ಮೂರು ಕಟ್ಟಡಗಳು ಬಿದ್ದುಹೋಗಿದೆ ” ಅಂದೆ.” ಇದು ಇಲ್ಲಿಗೆ ನಿಲ್ಲೋದಿಲ್ಲ ಮಗಾ, ನಾವು ನಮಗೆ ಇಷ್ಟ ಬಂದ ಹಾಗೆ ಪ್ರಕೃತಿಯನ್ನು ಆಟ ಆಡಿಸಿದೆವು. ಅದು ಬಿಡುತ್ತಾ, ನಮಗೆ ಬೇಕಾದಾಗ ಮೋಡಬಿತ್ತನೆ, ನೀರಿಗೆ ಮಣ್ಣು ತುಂಬಿಸಿ ದೊಡ್ಡ ಕಟ್ಟಡ, ಕಾಡು ಕಡಿದು ಬಿಲ್ಡಿಂಗ್ ಕಟ್ಟಿದ್ದೇವೆ,ನದಿಗಳನ್ನ ಸಣ್ಣದು ಮಾಡಿದ್ದೇವೆ ,ಕಸ ಕಡ್ಡಿ ಪ್ಲಾಸ್ಟಿಕ್ ಎಲ್ಲಾ ತುಂಬಿಸಿದ್ದೇವೆ.

ಅದು ಎಷ್ಸಟು ದಿನಟ ಅಂತ ನೋಡುತ್ತೆ. ಒಂದು ದಿನ ಬಂದು ಇದು ನನ್ನ ಜಾಗ ಹೊರಟು ಹೋಗುವಂತೆ ಆಜ್ಞಾಪಿಸುತ್ತೆ.ಆಗ ಹೊರಡಲೇ ಬೇಕು. ಮಾತನಾಡಲು ಅವಕಾಶವೇ ಇಲ್ಲ. ನಮ್ಮ ಬದುಕಿಗೆ ಏನು ಬೇಕು ಅನ್ನೋದನ್ನ ತಿಳ್ಕೊಂಡ್ರೆ ನಾವು ಇನ್ನೂ ಬೇಕು ಅನ್ನೋದನ್ನ ಬಯಸೋದಿಲ್ಲ.
ಪ್ರಕೃತಿಯಿಂದಲೇ ನಾವು ಬದುಕಿರುವುದು ಅಂದುಕೊಂಡರೆ ಎಲ್ಲ ಸರಿಯಾಗುತ್ತೆ” .ಅಪ್ಪನ ಮಾತು ಹೌದು ಅನ್ನೋದನ್ನು ಯೋಚಿಸುತ್ತಾ ಕಿಟಕಿ ಪಕ್ಕ ನೀರಿನ ಹನಿಗಳು ಮನೆಯೊಳಗೆ ರಾಚುವುದನ್ನು ನೋಡುತ್ತಾ ಕುಳಿತಿದ್ದೆ. ಮಳೆಯ ಸಿಟ್ಟು ಸ್ವಲ್ಪ ಜೋರಾಗಿತ್ತು..
ಧೀರಜ್ ಬೆಳ್ಳಾರೆ