LATEST NEWS
ದಿನಕ್ಕೊಂದು ಕಥೆ- ಮೂಲ?
ಮೂಲ?
“ಯಾಕೆ ಹೀಗೆ? ನನ್ನ ಸೃಷ್ಟಿಗಳೇ ನನ್ನ ಸೃಷ್ಟಿಯ ಬಗ್ಗೆ ಹಕ್ಕು ಸ್ಥಾಪಿಸಲು ಹೊರಟಿದ್ದಾರೆ. ನನ್ನ ಹುಟ್ಟಿನ ಮೂಲವನ್ನು ತಮ್ಮಲ್ಲಿಯೇ ಎನ್ನುವ ವಾದವನ್ನು ಆರಂಭಿಸಿದ್ದಾರೆ. ನಾನು ಸರ್ವಶಕ್ತ, ಸರ್ವವ್ಯಾಪಕ. ಹುಟ್ಟಿದ ಸ್ಥಳದಲ್ಲಿ ವಿಶೇಷವಾಗಿದ್ದು ಉಳಿದ ಕಡೆ ಬರೀಯ ಶೇಷವಾಗಿ ಇರುವುದಿಲ್ಲ. ಮತ್ತೇಕೆ ಜಗಳ?.
ಮೂಲ ಹುಡುಕುವಿಕೆಗೆ ನಿಮ್ಮ ಸಂಶೋಧನೆಗಳು, ಸಾಕ್ಷಿ ಸಂಗ್ರಹ, ಹೋರಾಟ ,ಕಾನೂನು ಇದರಿಂದ ಸಾಧಿಸಿದ್ದೇನು?. ನಿನ್ನೊಳಗೆ ನೀನೆ ನನ್ನ ಸ್ಥಾಪಿಸದ ಹೊರತು ಗುಡಿಯೊಳಗೆಯೋ, ಒಂದು ಸ್ಥಳದಲ್ಲಿಯೋ ಸ್ಥಾಪಿಸಿ ನಂಬಿದರೆ ಏನು ಬಂತು. ನಿನ್ನೊಳಗೆ ಹುಡುಕು ಮತ್ತೆ ಹೊರಗಡೆ ಹೊರಡು…”
ನಿರಾಕಾರನ ಮೂರ್ತಿ ನನ್ನೊಂದಿಗೆ ಮಾತನಾಡುವಂತೆ ಅನ್ನಿಸುತ್ತಿತ್ತು. ಮೇಜಿನ ಮೇಲೆ ಹಿಂದಿನ ದಿನದ ದಿನಪತ್ರಿಕೆಯೊಂದು ಗಾಳಿಗೆ ಹಾರುತ್ತಿತ್ತು.
ಧೀರಜ್ ಬೆಳ್ಳಾರೆ