LATEST NEWS
ದಿನಕ್ಕೊಂದು ಕಥೆ- ಅವಳ ಮಾತು

ಅವಳ ಮಾತು
ತೊರೆದು ಹೋದವರ ಬಗ್ಗೆ ಚಿಂತಿಸಲೋ ಅಥವಾ ಸಂಭ್ರಮಪಡಲೋ ತಿಳಿಯುತ್ತಿಲ್ಲ. ದಿನವು ಸಿಗುವ ಹಾದಿಯಲ್ಲಿನ ಬೀದಿದೀಪಗಳು ಕತ್ತಲಲ್ಲಿ ಮಲಗಿದೆ .ಹಾಗಾಗಿ ನೆರಳು ನನ್ನೊಳಗೆ ಸೇರಿಕೊಂಡಿದೆ.
ಕಿರು ಬೆಳಕಿನ ಹನಿಗಾಗಿ ಸುಮ್ಮನೆ ಹಾದಿ ಅಡ್ಡಾಡುತ್ತಿದ್ದೇನೆ. ಸಣ್ಣ ಬೆಳಕು ನೆರಳನ್ನು ನನ್ನೊಳಗಿಂದ ಹೊರತಂದು ಜೊತೆಗೆ ಹೆಜ್ಜೆ ಹಾಕಲು ಸಹಾಯಕನೊಬ್ಬನನ್ನ ನೀಡುತ್ತದೆ .ಆದರೂ ಈ ಏಕಾಂಗಿತನ ದುಃಖದೊಳಗೆ ಸಂತಸವನ್ನು ನೀಡುತ್ತಿದೆ. ಅವನಿಲ್ಲದೆ ಬದುಕಿಲ್ಲ ಅಂದುಕೊಂಡಿದ್ದೆ ಅದರೆ ಅದು ಸತ್ಯವಲ್ಲ .ಇನ್ನೊಂದು ಮಗ್ಗುಲಿನ ಪರಿಚಯ ಆಗಿದೆ. ನನ್ನವರು ಅನ್ನೋರು ಇದ್ದಾರೆ.

ಬದುಕಿನ ಹೊಸದೊಂದು ದಿಶೆ ಕಾಣುತ್ತಿದೆ. ಧನ್ಯವಾದ ಸಲ್ಲಿಸಿಬೇಕಿದೆ ಅವನಿಗೆ. ತೊರೆದದಕ್ಕೆ. ಬದುಕು ಕಲಿಸಿದೆ ಬದುಕುವುದನ್ನ, ನನ್ನೊಳಗಿನ ಶಕ್ತಿಯನ್ನು, ಶಬ್ದವಿಲ್ಲದ ಮಾತನ್ನ ,ಶೂನ್ಯ ಸಂಭ್ರಮವನ್ನ. ನನ್ನ ದುಃಖಕ್ಕೆ ಯಾರಿಂದಲೂ ಸಾಂತ್ವನ ಬಯಸುವುದಿಲ್ಲ .ಇನ್ನೊಬ್ಬರ ದುಃಖಕ್ಕೆ ನಾನು ಮರುಗುತ್ತಾ ಕೂರುವುದಿಲ್ಲ. ಬದುಕು ನನ್ನದು ನನ್ನದು ಮಾತ್ರ …….ಇದು ಅವಳು ಮಾತು ನಂದಲ್ಲ ?.
ಧೀರಜ್ ಬೆಳ್ಳಾರೆ