FILM
ಮುಂಬೈ – 23 ವರ್ಷದ ಕಿರುತೆರೆ ನಟನ ಬಲಿ ಪಡೆದ ಟ್ರಕ್
ಮುಂಬೈ ಜನವರಿ 18:ಟ್ರಕ್ ಒಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಕಿರುತೆರೆ ನಟ ಸಾವನಪ್ಪಿದ ಘಟನೆ ಮುಂಬೈನ ಜೋಗೇಶ್ವರಿ ರಸ್ತೆಯಲ್ಲಿ ನಡೆದಿದೆ. ಮೃತರನ್ನು ಹಿಂದಿ ಕಿರುತೆರೆ ನಟ ಅಮನ್ ಜೈಸ್ವಾಲ್ (23) ಎಂದು ಗುರುತಿಸಲಾಗಿದೆ.
ಆಡಿಶನ್ ನೀಡಲು ಜೈಸ್ವಾಲ್ ತೆರಳುತ್ತಿದ್ದ ವೇಳೆ ಜೋಗೇಶ್ವರಿ ರಸ್ತೆಯಲ್ಲಿ ಟ್ರಕ್ ಬೈಕ್ ಗೆ ಡಿಕ್ಕಿ ಹೊಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ ಜೈಸ್ವಾಲ್ ಅವರನ್ನು ಕೂಡಲೇ ಕಾಮಾ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಟ್ರಕ್ ಚಾಲಕನ ವಿರುದ್ಧ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ‘ಧರ್ತಿಪುತ್ರ ನಂದಿನಿ’ ಧಾರಾವಾಹಿಯಲ್ಲಿ ಜೈಸ್ವಾಲ್ ಅವರು ಪ್ರಮುಖ ಪಾತ್ರಕ್ಕಾಗಿ ಹೆಸರುವಾಸಿಯಾಗಿದ್ದರು.
Continue Reading