Connect with us

BELTHANGADI

ಜೂನ್ 8 ರಿಂದ ಭಕ್ತರ ದರ್ಶಕ್ಕೆ ಸಿದ್ದವಾದ ಧರ್ಮಸ್ಥಳ

ದೇವರ ದರ್ಶದ ನಿಯಮದಲ್ಲಿ ಹಲವು ಮಾರ್ಪಾಡು

ಬೆಳ್ತಂಗಡಿ ಜೂನ್ 6: ಲಾಕ್ ಡೌನ್ 5.0 ನಡುವೆ ರಾಜ್ಯ ಸರಕಾರ ಜೂನ್ 8 ರಿಂದ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಅವಕಾಶ ನೀಡಿರುವ ಹಿನ್ನಲೆ ದಕ್ಷಿಣಕನ್ನಡ ಜಿಲ್ಲೆಯ ದೇವಸ್ಥಾನಗಳಲ್ಲಿ ಭಕ್ತರ ಬರ ಮಾಡಿಕೊಳ್ಳಲು ಸಿದ್ದತೆಗಳು ನಡೆಯುತ್ತಿದೆ.

ರಾಜ್ಯದ ಹೆಸರಾಂತ ಪುಣ್ಯಕ್ಷೇತ್ರವಾದ ದಕ್ಷಿಣಕನ್ನಡ ಜಿಲ್ಲೆಯ ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನವು ಜೂನ್ 8 ರಿಂದ ಭಕ್ತರ ದರ್ಶನಕ್ಕೆ ತೆರೆಯಲಿದೆ.  ಕೊರೊನಾ ಹಿನ್ನಲೆಯಲ್ಲಿ ದೇವಸ್ಥಾನದ ದರ್ಶನ ನಿಯಮದಲ್ಲಿ ಹಲವು ಮಾರ್ಪಾಡುಗಳನ್ನು ಮಾಡಲಾಗಿದ್ದು, ಕೇಂದ್ರ ಸರಕಾರ ಸೂಚಿಸಿದ ಎಲ್ಲಾ ಮಾರ್ಗದರ್ಶಿಗಳನ್ನು ಪಾಲಿಸಲು ದೇವಸ್ಥಾನ ಆಡಳಿತ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.

ಈ ಕುರಿತಂತೆ ಮಾಹಿತಿ ನೀಡಿದ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವಿರೇಂದ್ರ ಹೆಗ್ಗಡೆಯವರು ಸದ್ಯ 800 ರಿಂದ ಸಾವಿರ ಮಂದಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದ್ದು, ದೇವರ ದರ್ಶನಕ್ಕೆ ಆಗಮಿಸುವ ಎಲ್ಲ ಭಕ್ತರ ಆಧಾರ್ ಕಾರ್ಡ್ ಮಾಹಿತಿಯನ್ನು ದಾಖಲಿಸಲಾಗುವುದು ಎಂದು ತಿಳಿಸಿದ ಅವರು ಪ್ರತಿಯೊಬ್ಬ ಭಕ್ತರ ಟೆಂಪರೇಚರ್ ನೋಡಿ ಸ್ಯಾನಿಟೈಸರ್ ಹಾಕಿ ದರ್ಶನಕ್ಕೆ ಅವಕಾಶ ನೀಡಲಾಗುವುದು.

ದೇವಸ್ಥಾನದ ಎಲ್ಲಾ ಸಿಬ್ಬಂದಿ ಗಳು ಪೇಸ್ ಶೀಲ್ಡ್ , ಗ್ಲೌಸ್ ಹಾಕಲಿದ್ದು, ಎಲ್ಲಾ ಹರಕೆ ಸೇವೆಗಳೂ ನಿರಂತರ ನಡೆಯಲಿದೆ. ಇನ್ನು ಅನ್ನಪೂರ್ಣ ಅನ್ನಛತ್ರದಲ್ಲಿ ನಿತ್ಯ ಅನ್ನದಾನ ಇರಲಿದ್ದು, ಸಾಮಾಜಿಕ ಅಂತರ ಕಾಪಾಡಿಕೊಂಡು ಊಟದ ವ್ಯವಸ್ಥೆ ಮಾಡಲಾಗುವುದು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ತಿಳಿಸಿದ್ದಾರೆ.

ಈ ಕುರಿತಂತೆ ಧರ್ಮಸ್ಥಳ ಆಡಳಿತ ಮಂಡಳಿ ಪ್ರಕಟಣೆ ನೀಡಿದ್ದು, ದೇವಸ್ಥಾನಕ್ಕೆ ಬರುವ ಎಲ್ಲಾ ಭಕ್ತರು ಮಾಸ್ಕ್ ಕಡ್ಡಾಯ ಧರಿಸಬೇಕು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ನಿಟ್ಟನಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ದೇವಸ್ಥಾನಕ್ಕೆ ಪ್ರವೇಶಿಸುವ ಎಲ್ಲಾ ಭಕ್ತರು ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ಬಳಕೆ ಮಾಡಬೇಕೆಂದು ಸೂಚಿಸಲಾಗಿದೆ.

ದೇವಸ್ಥಾನದ ಅನ್ನಛತ್ರದಲ್ಲೂ ಕೆಲವೊಂದು ಬದಲಾವಣೆಗಳನ್ನು ಮಾಡಲಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡೇ ಅನ್ನ ಸಂತರ್ಪಣೆಯನ್ನು ನೆರವೇರಿಸಲೂ ತೀರ್ಮಾನಿಸಲಾಗಿದೆ. ಅನಾರೋಗ್ಯ ಇದ್ದವರು ದೇವಸ್ಥಾನಕ್ಕೆ ಭೇಟಿ ನೀಡದಂತೆ ದೇವಸ್ಥಾನದ ಆಡಳಿತ ಮಂಡಲಿ ಭಕ್ತರಲ್ಲಿ ಮನವಿ ಮಾಡಿದ್ದು, ಇಂಥವರು ಬಂದಲ್ಲಿ ದರ್ಶನಕ್ಕೆ ಅವಕಾಶವನ್ನು ಕಲ್ಪಿಸುವುದಿಲ್ಲ ಎನ್ನುವ ಸೂಚನೆಯನ್ನೂ ನೀಡಿದೆ.
ಅಲ್ಲದೆ ಭಕ್ತಾಧಿಗಳು ಈ ಎಲ್ಲಾ ನಿಯಮಗಳನ್ನು ಪಾಲಿಸುವಂತೆ ಮಾಡುವ ಭದ್ರತಾ ವ್ಯವಸ್ಥೆಯನ್ನೂ ಕ್ಷೇತ್ರದ ವತಿಯಿಂದ ಮಾಡಲಾಗಿದ್ದು, ಭದ್ರತಾ ಸಿಬ್ಬಂದಿಗಳು ನಿರ್ದೇಶನವನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎನ್ನುವ ಮನವಿಯನ್ನು ಮಾಡಲಾಗಿದೆ.

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *