ಬೆಳ್ತಂಗಡಿ ಅಗಸ್ಟ್ 09: ಧರ್ಮಸ್ಥಳ ಗ್ರಾಮದಲ್ಲಿ ಶವಹೂತ ಹಾಕಿದ್ದೇನೆ ಎಂಬ ಅನಾಮಿಕನ ದೂರಿನ ಪ್ರಕಾರ ತನಿಖೆ ನಡೆಸುತ್ತಿರುವ ಎಸ್ ಐಟಿ ತಂಡ ಇಂದು ಸಾಕ್ಷಿದಾರ ತೋರಿಸಿದ ಹೊಸ ಜಾಗದಲ್ಲಿ ಉತ್ಖನನ ನಡೆದಿದೆ. ಆದರೆ ಅಲ್ಲೂ ಯಾವುದೇ ರೀತಿಯ ಕುರುಹು ಸಿಗದೇ ಬರೀಗೈಲಿ ವಾಪಾಸ್ ಆಗಿದೆ ಎಂದು ತಿಳಿದು ಬಂದಿದೆ.

ಸಾಕ್ಷಿ ದೂರುದಾರ ಧರ್ಮಸ್ಥಳದ ಗ್ರಾಮದ ಬಾಹುಬಲಿ ಬೆಟ್ಟಕ್ಕೆ ತೆರಳುವ ದಾರಿಯ ಪಕ್ಕದಲ್ಲಿ ಜಾಗವನ್ನು ತೋರಿಸಿದ್ದು, ಅಲ್ಲೇ ಅಗೆಯಲಾಗಿದೆ. 20 ಅಡಿ ಅಗಲ, 20 ಅಡಿ ಉದ್ದ ಅಗೆದರೂ ಏನೂ ಪತ್ತೆಯಾಗಿಲ್ಲ. ಇನ್ನು, 16ನೇ ಪಾಯಿಂಟ್ಗೆ 15 ಅಡಿ ದೂರದಲ್ಲಿರೋ ಮತ್ತೊಂದು ಸ್ಥಳದಲ್ಲೂ ಶೋಧ ನಡೆದ್ರೂ ಏನೂ ಸಿಕ್ಕಿಲ್ಲ.
ಸಾಕ್ಷಿ ದೂರುದಾರ ಮೃತದೇಹಗಳನ್ನು ಹೂತಿರುವ ಕುರಿತು ಧರ್ಮಸ್ಥಳ ಗ್ರಾಮದಲ್ಲಿ ಒಟ್ಟು 15 ಜಾಗಗಳನ್ನು ತೋರಿಸಿದ್ದು ಅವುಗಳಲ್ಲಿ 14 ಜಾಗಗಳ ಶೋಧಕಾರ್ಯ ಪೂರ್ಣಗೊಂಡಿದೆ. ಇವುಗಳಲ್ಲಿ ಎರಡು ಕಡೆ ಮಾತ್ರ ಮೃತದೇಹಗಳ ಅವಶೇಷ ಸಿಕ್ಕಿದೆ. ಆತ ಮೊದಲ ದಿನ ತೋರಿಸಿದ್ದ 13ನೇ ಜಾಗದಲ್ಲಿ ಇನ್ನಷ್ಟೇ ಶೋಧ ಕಾರ್ಯ ನಡೆಯಬೇಕಿದೆ. ಈ ಮಧ್ಯೆ, ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು ಅನಾಮಿಕ ಹೆಣ ಹೂತಿದ್ದನ್ನು ನೋಡಿದ್ದಾಗಿ ಮತ್ತೆ ಇಬ್ಬರು ಎಸ್ಐಟಿಗೆ ದೂರು ನೀಡಿದ್ದಾರೆ