LATEST NEWS
ಧರ್ಮಸ್ಥಳದ ಭಕ್ತರು ಮತ್ತು ಭದ್ರತಾ ಸಿಬ್ಬಂದಿಯ ಹೊಡೆದಾಟದ ವಿಡಿಯೋ ವೈರಲ್

ಧರ್ಮಸ್ಥಳದ ಭಕ್ತರು ಮತ್ತು ಭದ್ರತಾ ಸಿಬ್ಬಂದಿಯ ಹೊಡೆದಾಟದ ವಿಡಿಯೋ ವೈರಲ್
ಮಂಗಳೂರು ಜೂನ್ 30: ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿ ನೂಕುನುಗ್ಗಲು ಉಂಟಾಗಿ ಭಕ್ತರು ಮತ್ತು ಭದ್ರತಾ ಸಿಬಂದಿ ಹೊಡೆದಾಡಿಕೊಂಡ ಘಟನೆ ನಡೆದಿದೆ.
ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಭಕ್ತರ ದಟ್ಟಣೆ ಇರುವಾಗ ದೇವರ ದರ್ಶನಕ್ಕೆ ಸರತಿ ಸಾಲಿನಲ್ಲಿ ಹೋಗಬೇಕಾಗುತ್ತದೆ. ದೇವಸ್ಥಾನದ ಬಲ ಬದಿಯಿಂದ ಆರಂಭಿಸಿ ಒಂದು ಸುತ್ತು ಈ ಸಾಲು ಇರುತ್ತೆ. ಇದೇ ಸರತಿ ಸಾಲಿನಲ್ಲಿ ಸಾಗುವಾಗ ದೇವಸ್ಥಾನದ ಭದ್ರತಾ ಸಿಬ್ಬಂದಿ ಮತ್ತು ಭಕ್ತರ ನಡುವೆ ಮಾತಿಗೆ ಮಾತು ಬೆಳೆದು ಭದ್ರತಾ ಸಿಬಂದಿ ಮತ್ತು ಭಕ್ತರು ಹೊಡೆದಾಡಿದ್ದಾರೆ. ಈ ಕುರಿತಂತೆ ವಿಡಿಯೋ ಈಗ ವೈರಲ್ ಆಗಿದೆ.

ಸರತಿ ಸಾಲಿನಲ್ಲಿದ್ದ ಮಹಿಳೆಯರು, ಯುವಕರು ಸೇರಿ ಹೊಡೆದಾಡಿದ್ದಲ್ಲದೆ, ದೇವಸ್ಥಾನ ಅನ್ನೋದನ್ನೂ ಲೆಕ್ಕಿಸದೆ ಬೈದಾಡಿಕೊಂಡಿದ್ದಾರೆ. ಕೊನೆಗೆ ಹೆಚ್ಚುವರಿ ಭದ್ರತಾ ಸಿಬಂದಿ ಮತ್ತು ಧರ್ಮಸ್ಥಳ ಠಾಣೆ ಪೊಲೀಸರು ಆಗಮಿಸಿ, ಗಲಾಟೆ ನಡೆಸಿದ ಯುವಕನನ್ನು ವಶಕ್ಕೆ ಪಡೆದಿದ್ದಾರೆ.
ಹೀಗೆ ಭಕ್ತರು ಮತ್ತು ದೇವಳದ ಭದ್ರತಾ ಸಿಬ್ಬಂದಿ ಹೊಡೆದಾಡಿ ಕೊಂಡಿರುವ ಘಟನೆಯನ್ನು ಅಲ್ಲೇ ಇದ್ದ ಭಕ್ತರ ಮೊಬೈಲಿನಲ್ಲಿ ಸೆರೆಯಾಗಿದೆ. ಭದ್ರತಾ ಸಿಬಂದಿಗಳ ದರ್ಪದಿಂದಾಗಿ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಲಾಗಿದ್ದು, ವ್ಯವಸ್ಥೆಯ ಲೋಪ ಮತ್ತು ಯುವಕರ ವರ್ತನೆಗೆ ಟೀಕೆ ವ್ಯಕ್ತವಾಗಿದೆ.