BELTHANGADI
ಶಬರಿಮಲೆಗೆ ಮಹಿಳೆಯರ ಪ್ರವೇಶದಿಂದ ವ್ರತಧಾರಿಗಳ ಸಂಯಮಕ್ಕೆ ಧಕ್ಕೆ – ಡಾ. ಡಿ. ವಿರೇಂದ್ರ ಹೆಗ್ಗಡೆ

ಶಬರಿಮಲೆಗೆ ಮಹಿಳೆಯರ ಪ್ರವೇಶದಿಂದ ವ್ರತಧಾರಿಗಳ ಸಂಯಮಕ್ಕೆ ಧಕ್ಕೆ – ಡಾ. ಡಿ. ವಿರೇಂದ್ರ ಹೆಗ್ಗಡೆ
ಮಂಗಳೂರು ಅಕ್ಟೋಬರ್ 23: ಶಬರಿಮಲೆಗೆ ಮಹಿಳೆಯರಿಗೆ ಅವಕಾಶ ನೀಡಿದ ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧವಾಗಿ ಪ್ರತಿಭಟನೆಗಳು ನಡೆಯುತ್ತಿರುವ ನಡುವೆ ಇದೀಗ ಪ್ರತಿಭಟನಾಕಾರರಿಗೆ ಬೆಂಬಲವಾಗಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಧರ್ಮಸ್ಥಳದಲ್ಲಿ ಮಾತನಾಡಿದ ಅವರು ಶಬರಿಮಲೆಗೆ ಹೋಗುವ ಪ್ರತಿಯೊಬ್ಬನೂ 48 ದಿವಸಗಳ ವ್ರತ ಕೈಗೊಳ್ಳಬೇಕೆಂಬ ನಿಯಮವಿದೆ. ಈ ವೃತದ ಸಮಯದಲ್ಲಿ ಮನೋನಿಗ್ರಹ, ಸಂಯಮದ ಪಾಲನೆ ವೃತದ ಮುಖ್ಯ ಉದ್ಧೇಶವಾಗಿದೆ. ಆದರೆ ಸಮಾನತೆಯ ಹೆಸರಿನಲ್ಲಿ ಮೂಲ ಉದ್ದೇಶ, ಪಾವಿತ್ರ್ಯಕ್ಕೆ ಧಕ್ಕೆ ತರುವುದು ಸರಿಯಲ್ಲ ಎಂದರು.

ಶಬರಿಮಲೆ ವ್ರತ ನಿಷ್ಠರು ಮಹಿಳೆಯರು ಮಾಡಿದ ಆಹಾರವನ್ನೂ ಸ್ವೀಕರಿಸುವುದಿಲ್ಲ . ಇಂಥ ಕಠಿಣ ವೃತಾಚರಣೆಯನ್ನು ಆಚರಿಸುವ ಕ್ಷೇತ್ರಕ್ಕೆ ಮಹಿಳೆಯರ ದರ್ಶನದಿಂದ ವ್ರತಧಾರಿಗಳ ಸಂಯಮಕ್ಕೆ ಧಕ್ಕೆ ಬರಬಹುದು ಎಂದರು. ಭಕ್ತಿಯಿದ್ದರೆ ಕ್ಷೇತ್ರಕ್ಕೆ ಹೋಗಿಯೇ ಆರಾಧನೆ ಮಾಡಬೇಕಿಲ್ಲ. ಮನೆಯಲ್ಲೂ ದೇವರ ಆರಾಧನೆ ಮಾಡಬಹುದು ಎಂದರು.
ಧಾರ್ಮಿಕ ಕ್ಷೇತ್ರಗಳಿಗೆ ಮಹಿಳೆಯರ ಪ್ರವೇಶ ನಿಷೇಧ ಕೇವಲ ಭಾರತದಲ್ಲಿ ಮಾತ್ರ ಇರುವುದಲ್ಲ,, ಈ ನಿಯಮ ವಿದೇಶಗಳಲ್ಲಿಯೂ ಇದೆ ಎಂದ ಅವರು ಈ ನಿಯಮಗಳನ್ನು ಮುರಿಯುವ ಮೂಲಕ ಧಾರ್ಮಿಕ ಕ್ಷೇತ್ರಗಳ ಸೌಂದರ್ಯ ಹಾಳು ಮಾಡಬಾರದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.