BELTHANGADI
ಧರ್ಮಸ್ಥಳದ ಬಗ್ಗೆ ಟೀಕೆಗಳಿಗೆ ಯಾವುದೇ ಭಯ ಬೇಡ – ನನ್ನಂತ ನೂರಾರು ಡಿಕೆ ಶಿವಕುಮಾರ್ ನಿಮ್ಮ ಹಿಂದೆ ನಿಲ್ಲಲ್ಲು ಸಿದ್ದ

ಬೆಳ್ತಂಗಡಿ ಎಪ್ರಿಲ್ 21: ಧರ್ಮಸ್ಥಳ ಮತ್ತು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವಿರೇಂದ್ರ ಹೆಗ್ಗಡೆ ಅವರ ವಿರುದ್ದ ಇತ್ತೀಚೆಗೆ ಕೇಳಿ ಬರುತ್ತಿರುವ ಟೀಕೆಗಳಿಗೆ ಡಿಕೆ ಶಿವಕುಮಾರ್ ವಾರ್ನಿಂಗ್ ಕೊಟ್ಟಿದ್ದು, ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳ ಹಿಂದೆ ನನ್ನತಂಹ ನೂರಾರು ಡಿಕೆ ಶಿವಕುಮಾರ್ ಗಳು ನಿಮ್ಮ ಹಿಂದೆ ನಿಲ್ಲಲು ಸಿದ್ದರಿದ್ದಾರೆ ಎಂದು ಹೇಳಿದ್ದಾರೆ
ಧರ್ಮಸ್ಥಳದಲ್ಲಿ ನಿರ್ಮಿಸಿರುವ ಉಮಾಮಹೇಶ್ವರ, ಶಿವಪಾರ್ವತಿ ಮತ್ತು ಗೌರೀಶಂಕರ ಎಂಬ ಕಲ್ಯಾಣ ಮಂಟಪಗಳ ಸಮುಚ್ಚಯವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು. ಧರ್ಮಸ್ಥಳದ ಬಗ್ಗೆ ಬರುವ ಟೀಕೆಗಳ ಬಗ್ಗೆ ಯಾವುದೇ ಭಯ ಬೇಡ. ಟೀಕೆಗಳು ಸಾಯುತ್ತವೆ ನಾವು ಮಾಡುವ ಕಾರ್ಯಗಳು ಉಳಿಯುತ್ತವೆ. ಯಾವುದಕ್ಕೂ ಅಂಜುವ ಸಂದರ್ಭವೇ ಇಲ್ಲ. ನನ್ನತಂಹ ನೂರಾರು ಡಿಕೆ ಶಿವಕುಮಾರ್ ಗಳು ನಿಮ್ಮ ಹಿಂದೆ ನಿಲ್ಲಲು ಸಿದ್ದರಿದ್ದಾರೆ ಎಂದು ಉಪಮುಖ್ಯ ಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಧರ್ಮಸ್ಥಳದಲ್ಲಿ ನಿತ್ಯವೂ ನಡೆಯುತ್ತಿರುವ ಅನ್ನದಾನ, ವಿದ್ಯಾದಾನ, ಔಷಧಿದಾನ ಮತ್ತು ಅಭಯದಾನಗಳು ದೇಶದ ಇತಿಹಾಸದಲ್ಲೇ ಸುವರ್ಣಾಕ್ಷರಗಳಿಂದ ಬರೆಯಬೇಕಾಗಿದೆ ಎಂದರು. ಹೆಗ್ಗಡೆ ಅವರು ಜೈನರು, ದೇವಸ್ಥಾನ ಹಿಂದೂ ದೇವಸ್ಥಾನ ಎಂದು ಟೀಕಿಸುವವರನ್ನು ಖಂಡಿಸಿದ ಶಿವಕುಮಾರ್, ಹೆಗ್ಗಡೆಯವರು ಇದಕ್ಕೆ ಅಂಜಬೇಕಾಗಿಲ್ಲ, ಅಳುಕಬೇಕಾಗಿಲ್ಲ. ನಿಮ್ಮ ಜೊತೆ ನಾವಿದ್ದೇವೆ. ನಿಮ್ಮ ಹಾಗೂ ಕ್ಷೇತ್ರದ ರಕ್ಷಣೆಗೆ ನಾವೆಲ್ಲ ಸಿದ್ದರು, ಬದ್ದರು. ಟೀಕೆಗಳು ತಾತ್ಕಾಲಿಕವಾಗಿದ್ದು, ಅಲ್ಪಕಾಲದಲ್ಲಿ ಸಾಯುತ್ತವೆ. ನಾವು ಮಾಡುವ ಸೇವಾಕಾರ್ಯಗಳು ಶಾಶ್ವತವಾಗಿರುತ್ತವೆ ಎಂದು ಅವರು ಹೇಳಿದರು.