LATEST NEWS
ದೇಶದಲ್ಲಿ ಶೇಕಡ 99 ರಷ್ಟು ಲಾಕ್ ಡೌನ್ ಪಾಲಿಸುತ್ತಿದ್ದರೆ 1 ರಷ್ಟು ಜನ ಅವಿವೇಕದಿಂದ ವರ್ತಿಸುತ್ತಿದ್ದಾರೆ – ಡಾ.ಡಿ ವಿರೇಂದ್ರ ಹೆಗ್ಗಡೆ

ದೇಶದಲ್ಲಿ ಶೇಕಡ 99 ರಷ್ಟು ಲಾಕ್ ಡೌನ್ ಪಾಲಿಸುತ್ತಿದ್ದರೆ 1 ರಷ್ಟು ಜನ ಅವಿವೇಕದಿಂದ ವರ್ತಿಸುತ್ತಿದ್ದಾರೆ – ಡಾ.ಡಿ ವಿರೇಂದ್ರ ಹೆಗ್ಗಡೆ
ಬೆಳ್ತಂಗಡಿ ಮಾರ್ಚ್ 30: ಕೊರೊನಾದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವ ಕ್ರಮಗಳನ್ನು ಅನುಸರಿಸಿ, ಮನೆಯ ಒಳಗಡೆಯೇ ಇರಿ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ದೇಶದಲ್ಲಿ ಶೇ.99ರಷ್ಟು ಜನ ಲಾಕ್ ಡೌನ್ ಪಾಲಿಸುತ್ತಿದ್ದಾರೆ. ಆದರೆ ಶೇ.1 ರಷ್ಟು ಜನ ಅವಿವೇಕದಿಂದ ವರ್ತಿಸುತ್ತಿದ್ದಾರೆ. ಕಳೆದ ಎರಡು ವಾರಗಳಲ್ಲಿ ಧರ್ಮಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದಿಲ್ಲ ಅವರಿಗೆಲ್ಲ ನನ್ನ ಧನ್ಯವಾದಗಳು.

ದೇಶವನ್ನು ಲಾಕ್ ಡೌನ್ ಮಾಡುವ ನಿರ್ಧಾರ ದೊಡ್ಡ ಸವಾಲಿನ ಕೆಲಸವಾಗಿದ್ದು ಪ್ರಧಾನಿ ಮೋದಿಯವರು ನಮ್ಮ ಉಳಿವಿಗಾಗಿ ದೇಶದ ಮೇಲೆ ಲಾಕ್ ಡೌನ್ ಹೇರಿದ್ದಾರೆ. ಪಾಲಕರೇ ಮಕ್ಕಳಿಗೆ ವಿವೇಕವನ್ನು ಕಲಿಸಿಕೊಡಿ, ಅಗತ್ಯವಿದ್ದಾಗ ಮಾತ್ರ ಮನೆಯಿಂದ ಹೊರಬನ್ನಿ. ಇದು ನಿಮ್ಮ ಕುಟುಂಬದವರ ಜೊತೆ ಕಾಲಕಳೆಯಲು ಇರುವ ಉತ್ತಮ ಸಮಯವಾಗಿದೆ. ದಯವಿಟ್ಟು ಸರಕಾರದ ನಿರ್ದೇಶನಗಳನ್ನು ಅನುಸರಿಸಿ ಎಂದರು. ಈ ಸಮಯದಲ್ಲಿ ಯೋಗಾಸಾನ ,ಧ್ಯಾನ ಮಾಡಿ. ಭವಿಷ್ಯದ ಪೀಳಿಗೆಗೆ ಆರೋಗ್ಯಯುತ ಪ್ರಪಂಚವನ್ನು ನೀಡುವ ಸಂಕಲ್ಪ ಮಾಡೋಣ, ನಮ್ಮ ಹಿತದ ಜೊತೆ ಲೋಕದ ಹಿತವನ್ನು ಆಲೋಚಿಸೋಣ ಎಂದು ಕರೆ ನೀಡಿದರು.