DAKSHINA KANNADA
ಧನರಾಜ್ ಆಚಾರ್ ಹರಕೆಯ ಕುರಿ ಮಾಡಿದ ಮಂಜು ಮತ್ತು ಗೌತಮಿ ಜೋಡಿ
ಬೆಂಗಳೂರು ಜನವರಿ 09: ಬಿಗ್ ಬಾಸ್ ಸೀಸನ್ 11 ರಲ್ಲಿ ತಮ್ಮ ಮನೋರಂಜನೆ ವಿಚಾರದಿಂದಲೇ ಬಿಗ್ ಬಾಸ್ ಸೀಸನ್ ನಲ್ಲಿ ಉತ್ತಮ ಆಟ ಆಡುತ್ತಿರುವ ಧನರಾಜ್ ಆಚಾರ್ ಈ ಬಾರಿ ಹರಕೆಯ ಕುರಿಯಾಗಿದ್ದಾರೆ.
ಟಿಕೆಟ್ ಟು ಫಿನಾಲೆ ಟಾಸ್ಕ್ ನಲ್ಲಿ ಮಂಜು ಮತ್ತು ಗೌತಮಿ ಜೋಡಿ ಧನರಾಜ್ ಅವರನ್ನು ಹೊರಗಿಡುವ ಮೂಲಕ ಅವರನ್ನು ಹರಕೆಯ ಕುರಿ ಮಾಡಿದೆ. ಟಾಸ್ಕ್ ಹಾಗೂ ಮನೊರಂಜನೆಯಲ್ಲಿ ಉತ್ತಮ ಸ್ಪರ್ಧಿಯಾಗಿರುವು ಧನರಾಜ್ ಅವರನ್ನು ಈ ಜೋಡಿ ಬೇಕಂತೆ ಹರಕೆಯ ಕುರಿ ಮಾಡಿದೆ ಎಂದು ಮನೆ ಇತರ ಸದಸ್ಯರು ಹೇಳಿದ್ದಾರೆ.
ಧನರಾಜ್ ಅವರು ಬಿಗ್ ಬಾಸ್ನಲ್ಲಿ ಎಲ್ಲರನ್ನೂ ನಂಬಿಕೊಂಡಿದ್ದರು. ಆದರೆ ಆಟ ಸೋತು ಒಬ್ಬರನ್ನು ಹೊರಗೆ ಇಡಬೇಕು ಎಂದಾಗ ಎಲ್ಲರೂ ಧನರಾಜ್ ಹೆಸರನ್ನೇ ತೆಗೆದುಕೊಂಡರು. ಈ ಮೂಲಕ ಫಿನಾಲೆ ಟಿಕೆಟ್ ಪಡೆಯುವ ಅವಕಾಶ ಅವರ ಕೈ ತಪ್ಪಿದೆ. ಈ ವಾರ ಅವರು ನಾಮಿನೇಟ್ ಕೂಡ ಆಗಿದ್ದು, ಅದರಿಂದಲೂ ಬಚಾವ್ ಆಗಬೇಕಾದ ಅನಿವಾರ್ಯತೆ ಇದೆ. ಅವರಿಗೆ ನಂಬಿ ಮೋಸ ಹೋದ ಭಾವನೆ ಕಾಡುತ್ತಿದೆ.