Connect with us

    LATEST NEWS

    ಮಲ್ಪೆ ಮೀನುಗಾರರ ಬಲೆಗೆ ಬಿದ್ದ ಅಪರೂಪದ ಡೆವಿಲ್ ಫಿಶ್

    ಮಲ್ಪೆ ಮೀನುಗಾರರ ಬಲೆಗೆ ಬಿದ್ದ ಅಪರೂಪದ ಡೆವಿಲ್ ಫಿಶ್

    ಉಡುಪಿ ಫೆಬ್ರವರಿ 15: ಅಪರೂಪದ ದೊಡ್ಡ ಗಾತ್ರದ ದೆವ್ವ ಮೀನೊಂದು ಉಡುಪಿ ಮಲ್ಪೆಯ ಮೀನುಗಾರರ ಬಲೆಗೆ ಬಿದ್ದಿದೆ. ಸುಮಾರು ಐದು ಅಡ್ಡಿ ಉದ್ದವಿರುವ ಈ ಮೀನು ಆರು ಕೆಜಿಯಷ್ಟು ತೂಕವಿದೆ.

    ಒಮ್ಮೆಗೆ ಕಂಡರೆ ದೆವ್ವದಂತೆ ಭಾಸವಾಗುವ ಅಪರೂಪದ ಜಾತಿಯ ಮೀನಿದು. ಸಾಮಾನ್ಯ ಭಾಷೆಯಲ್ಲಿ ಹೇಳೋದಾದರೆ ಇದೊಂದು ಜಾತಿಯ ಆಕ್ಟೋಪಸ್. ಇದರ ವೈಜ್ಞಾನಿಕ ಹೆಸರು ಬಿಗ್ ಬ್ಲೂ ಆಕ್ಟೋಪಸ್ , ಡೆವಿಲ್ ಫಿಶ್ ಎಂದೇ ಈ ಮೀನು ಖ್ಯಾತಿ ಪಡೆದಿದೆ.

    ಅರಬ್ಬೀ ಸಮುದ್ರ ಮತ್ತು ಹಿಂದೂ ಮಗಾಸಾಗರದ ಕಲ್ಲು ಬಂಡೆಗಳ ಅಡಿಯಲ್ಲಿ 150 ಮೀಟರ್ ಆಳದಲ್ಲಿ‌ ಈ ಆಕ್ಟೋಪಸ್ ಜೀವಿಸುತ್ತದೆ. ಚೀನಾ, ಸಿಂಗಾಪುರ್, ಹಾಂಗ್ ಕಾಂಗ್ ನಲ್ಲಿ ಈ ಮೀನಿಗೆ ಬೇಡಿಕೆ ಹೆಚ್ಚು. ಸಂತಾನೋತ್ಪತ್ತಿ ಬಳಿಕ ಗಂಡು ಮೀನು ಸತ್ತರೆ, ಹೆಣ್ಣು ಮೀನು ಮರಿ ಹಾಕಿ ಅಸುನೀಗುತ್ತೆ. ಈ ತಳಿಯ ಮೀನಿನ ವಿಶೇಷ.

    Share Information
    Advertisement
    Click to comment

    Leave a Reply

    Your email address will not be published. Required fields are marked *