DAKSHINA KANNADA
ಸ್ಥಳೀಯರ ಆಕ್ರೋಶಕ್ಕೆ ಕಾರಣವಾದ – ದೇವರ ಗುಂಡಿ ಫಾಲ್ಸ್ ನಲ್ಲಿ ಬಿಕಿನಿ ಪೋಟೋ ಶೂಟ್

ಸುಳ್ಯ ಅಕ್ಟೋಬರ್ 29: ಸುಳ್ಯದ ದೇವರಗುಂಡಿ ಫಾಲ್ಸ್ ಬಳಿ ಬೆಂಗಳೂರಿನ ಮಾಡೆಲ್ ಗಳು ಬಿಕಿನಿ ಪೋಟೋ ಶೂಟ್ ಮಾಡಿಸಿಕೊಂಡಿದ್ದು ಈಗ ವಿವಾದಕ್ಕೆ ಕಾರಣವಾಗಿದೆ. ಮಾಡೆಲ್ ಗಳ ವಿರುದ್ದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಳ್ಯ ತಾಲೂಕಿನ ತೋಡಿಕಾನ ಗ್ರಾಮದ ದೇವರಗುಂಡಿ ಪ್ರದೇಶದಲ್ಲಿ ಈ ಜಲಪಾತ ಹತ್ತಿರದಲ್ಲೆ ಇರುವ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಸಂಬಂಧಿಸಿದ್ದಾಗಿದ್ದು, ಸಾಕ್ಷಾತ್ ಶಿವನೇ ಈ ಜಲಪಾತದಲ್ಲಿ ಸ್ನಾನಕ್ಕೆ ಆಗಮಿಸುತ್ತಿದ್ದರು ಎನ್ನುವುದು ಭಕ್ತಾಧಿಗಳ ನಂಬಿಕೆಯಾಗಿದೆ.

ಈ ಹಿನ್ನಲೆ ಈ ದೇವರಗುಂಡಿ ಫಾಲ್ಸ್ ನಲ್ಲಿ ಸ್ಥಳೀಯ ನಿವಾಸಿಗಳು ಸ್ನಾನ ಮಾಡದೇ ಸ್ಥಳದ ಪಾವಿತ್ರ್ಯತೆಯನ್ನು ಉಳಿಸಿಕೊಂಡು ಬಂದಿದ್ದರು. ಆದರೆ ಇದೀಗ ಬೆಂಗಳೂರಿನ ಬಿಕನಿ ಸುಂದರಿಯರು ಅರೆಬೆತ್ತಲಾಗಿ ಸುಳ್ಯ ದೇವರಗುಂಡಿ ಫಾಲ್ಸ್ ನಲ್ಲಿ ಪೋಟೋಶೂಟ್ ಮಾಡಿಸಿಕೊಂಡಿದ್ದು, ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಮಾಡೆಲ್ ಬೃಂಧಾ ಅರಸ್ ಸೇರಿ ಇಬ್ಬರು ಮಾಡೆಲ್ ಗಳು ಈ ಪೋಟೋ ಶೂಟ್ ಮಾಡಿಸಿಕೊಂಡಿದ್ದು, ಈಗ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಈ ಹಿನ್ನಲೆ ಇಂತಹ ಪವಿತ್ರ ಸ್ಥಳದಲ್ಲಿ ಅರೆಬೆತ್ತಲಾಗಿ ಪೋಟೋ ಶೂಟ್ ಮಾಡಿಸಿಕೊಂಡದ್ದಕ್ಕೆ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದು, ದೇವಸ್ಥಾನದ ಆಡಳಿತ ಮಂಡಳಿಗೆ ದೂರನ್ನು ನೀಡಿದ್ದಾರೆ. ಆದರೆ ದೇವಸ್ಥಾನ ಮಂಡಳಿ ನಾವು ಈ ಬಗ್ಗೆ ಯಾವುದೇ ಅನುಮತಿ ನೀಡಿಲ್ಲ ಎಂದು ತಿಳಿಸಿದೆ.