Connect with us

    LATEST NEWS

    ಡೆಂಗ್ಯು ತಡೆಗೆ ಆರೋಗ್ಯ ಇಲಾಖೆಯಿಂದ ಮನೆ ಮನೆ ಭೇಟಿ

    ಡೆಂಗ್ಯು ತಡೆಗೆ ಆರೋಗ್ಯ ಇಲಾಖೆಯಿಂದ ಮನೆ ಮನೆ ಭೇಟಿ

    ಉಡುಪಿ ಮೇ 25: ಜಿಲ್ಲೆಯನ್ನು ಬೇಸಿಗೆಯಲ್ಲಿ ಕಾಡುವ ಡೆಂಗ್ಯು ಜ್ವರ ಪ್ರಕರಣಗಳು ಆರೋಗ್ಯ ಇಲಾಖೆಯ ನಿರಂತರ ಕ್ರಮಗಳಿಂದ ಕಳೆದ ವರ್ಷಗಳಿಗೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಕಡಿಮೆಯಾಗಿದೆ ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ ಪ್ರೇಮಾನಂದ ಅವರು ಹೇಳಿದ್ದಾರೆ. ಆರೋಗ್ಯ ಇಲಾಖೆ ಪರಿಶೀಲನಾ ಸಭೆಗೆ ಮಾಹಿತಿ ನೀಡಿದ ಅವರು ಇಲಾಖೆಯ ಮುನ್ನೆಚ್ಚರಿಕೆ ಕ್ರಮಗಳಿಂದ ಕಳೆದ ಸಾಲಿಗೆ ಹೋಲಿಸಿದರೆ ಈ ಬಾರಿ ಮೇ 21 ರವರೆಗೆ 36 ಪ್ರಕರಣಗಳು ವರದಿಯಾಗಿದೆ.

    ಉಡುಪಿ ನಗರ ವ್ಯಾಪ್ತಿಯಲ್ಲಿ 5 ಪ್ರಕರಣ ಕುಂಜಿಬೆಟ್ಟು, ಅಂಬಲಪಾಡಿ, ಗೋಪಾಲಪುರದಲ್ಲಿ ವರದಿಯಾಗಿತ್ತು. ನಿಟ್ಟೂರಿನಲ್ಲಿ ಈ ಬಾರಿ ಯಾವುದೇ ಪ್ರಕರಣ ವರದಿಯಾಗಿಲ್ಲ. ಗ್ರಾಮೀಣ ಪ್ರದೇಶದಲ್ಲಿ 22 ಪ್ರಕರಣಗಳು ಪತ್ತೆಯಾಗಿದೆ. ಕಾರ್ಕಳದಲ್ಲಿ 4 ಪ್ರಕರಣ ಮಾಳ, ನಂದಳಿಕೆ, ಬೈಲೂರು ಪ್ರಕರಣ ವರದಿಯಾಗಿದೆ. ಕುಂದಾಪುರದಲ್ಲಿ 5 ಪ್ರಕರಣ ಸಿದ್ದಾಪುರ, ಬೈಂದೂರು, ಹಾಲಾಡಿ, ಕುಂದಾಪುರದಲ್ಲಿ ವರದಿಯಾಗಿದೆ. ಕಳೆದ ಸಾಲಿನಲ್ಲಿ ಒಟ್ಟು ಜಿಲ್ಲೆಯಲ್ಲಿ 383 ಪ್ರಕರಣಗಳು ವರದಿಯಾಗಿದ್ದು, ಈ ಸಾಲಿನಲ್ಲಿ ಕಡಿಮೆಯಾಗಿದೆ ಎಂದು ವಿವರಿಸಿದರು.

    ಮಳೆ ಬಿಟ್ಟು ಬಿಟ್ಟು ಬರುತ್ತಿರುವುದರಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚುತ್ತಿದ್ದು, ಜನರಿಗೆ ನೀರನ್ನು ಅವೈಜ್ಞಾನಿಕವಾಗಿ ಸಂಗ್ರಹಿಸಿಡುತ್ತಿರುವುದರಿಂದ ಸೊಳ್ಳೆಗಳು ಹೆಚ್ಚಾಗುತ್ತಿರುವ ಬಗ್ಗೆ, ಸೊಳ್ಳೆಗಳಿಂದ ಸಂಭವಿಸುತ್ತಿರುವ ವಿವಿಧ ಜ್ವರಗಳ ಬಗ್ಗೆ ಮನೆ ಮನೆ ಭೇಟಿಯ ವೇಳೆ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಕಿರಿಯ ಮಹಿಳಾ ಮತ್ತು ಪುರುಷ ಆರೋಗ್ಯ ಸಹಾಯಕರು ವಿವರಿಸುತ್ತಾರೆ.

    ನಗರದಲ್ಲಿ ವಸತಿರಹಿತರಿಗೆ ನೈಟ್ ಶೆಲ್ಟರ್ ಒದಗಿಸಿದ್ದು ಬೀಡಿನಗುಡ್ಡೆಯ ರಂಗಮಂದಿರದ ಎದುರು ಉತ್ತಮವಾಗಿ ನಿರ್ವಹಿಸಲ್ಪಡುತ್ತಿದೆ. ರಾತ್ರಿ ವೇಳೆ ಮಲಗಲು ಅಗತ್ಯವುಳ್ಳ ನಿರಾಶ್ರಿತರು ಇದನ್ನು ಬಳಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರಲ್ಲದೆ; ನೈಟ್ ಶೆಲ್ಟರ್‍ಗೆ ಸೊಳ್ಳೆ ಪರದೆಯನ್ನು ಒದಗಿಸಲು ಡಾಕ್ಟರ್ ಅವರಿಗೆ ಸೂಚಿಸಿದರು.

    ಕುಂದಾಪುರದಲ್ಲಿ ನೈಟ್ ಶೆಲ್ಟರ್ ಅಗತ್ಯವಿದ್ದು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಚೀಫ್ ಆಫೀಸರ್ ಅವರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಈಗಾಗಲೇ ನಗರದಲ್ಲಿ ವಿತರಿಸಲಾಗಿರುವ ಸೊಳ್ಳೆ ಪರದೆ ಸದ್ಬಳಕೆಯ ಬಗ್ಗೆಯೂ ಜಿಲ್ಲಾಧಿಕಾರಿಗಳು ಮಾಹಿತಿಯನ್ನು ಪಡೆದರಲ್ಲದೆ, ಸೊಳ್ಳೆ ಉತ್ಪತ್ತಿಯ ಬಗ್ಗೆ ಸಭೆಗೆ ಕೀಟಶಾಸ್ತ್ರಜ್ಞೆ ಮುಕ್ತ ಅವರು ನೀಡಿದ ಮಾಹಿತಿಯ ಆಧಾರದಲ್ಲಿ ಎಲ್ಲ ಕಟ್ಟಡ ನಿರ್ಮಾಣಕಾರರು ಕಾರ್ಮಿಕರಿಗೆ ಮೂಲ ಸೌಕರ್ಯದ ಜೊತೆಗೆ ನೀರನ್ನು ನಿಲ್ಲಿಸದಂತೆ ಕ್ರಮಕೈಗೊಳ್ಳಲು ಸೂಚನೆ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *