LATEST NEWS
ಸಿನಿಮೀಯ ಸ್ಟೈಲ್ ನಲ್ಲಿ ಸರಗಳ್ಳನ ಹಿಡಿದ ಪೊಲೀಸ್ ಸಿಬ್ಬಂದಿ

ನವದೆಹಲಿ ನವೆಂಬರ್ 25: ಮಹಿಳೆಯೊಬ್ಬರ ನಕ್ಲೇಸ್ ಕದ್ದು ಪರಾರಿಯಾಗುತ್ತಿದ್ದ ಕಳ್ಳನನ್ನು ಪೊಲೀಸ್ ಸಿಬ್ಬಂದಿ ಒಬ್ಬಂಟಿಯಾಗಿ ಹಿಡಿದ ಘಟನೆ ನವದೆಹಲಿಯಲ್ಲಿ ನಡೆದಿದ್ದು, ಘಟನೆಯ ಸಿಸಿಟಿವಿ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಘಟನೆಯ ವೀಡಿಯೋವನ್ನು ದೆಹಲಿ ಪೊಲೀಸರ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ಪ್ರಾಣವನ್ನು ಲೆಕ್ಕಿಸದೇ, ಶಹಬಾದ್ ಡೈರಿ ಪೊಲೀಸ್ ಠಾಣೆಯ ಕಾನ್‍ಸ್ಟೆಬಲ್ ಸತ್ಯೇಂದ್ರ ಕಳ್ಳನನ್ನು ಹಿಡಿದು ಬಂಧಿಸಿದ್ದಾರೆ. ಈ ಕಳ್ಳನ ಬಂಧನದೊಂದಿಗೆ 11 ಪ್ರಕರಣಗಳನ್ನು ಬಗೆಹರಿಸಲಾಗಿದೆ. ಈ ಸಂಬಂಧ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.

ವೀಡಿಯೋದಲ್ಲಿ ಕ್ರಿಮಿನಲ್ ಒಂದು ಕಡೆಯಿಂದ ಬರುತ್ತಿದ್ದಂತೆಯೇ ಕಾನ್‍ಸ್ಟೆಬಲ್ ತನ್ನ ಬೈಕನ್ನು ನಿಧಾನಗೊಳಿಸುತ್ತಾರೆ. ಪೊಲೀಸ್ ಅನ್ನು ಕಂಡ ಆರೋಪಿ ಗಾಬರಿಯಿಂದ ಎಸ್ಕೇಪ್ ಆಗಲು ಪ್ರಯತ್ನಿಸುತ್ತಾನೆ. ಆದರೆ ತಕ್ಷಣವೇ ಸತ್ಯೇಂದ್ರ ಅವರು ಆತನನ್ನು ಬಿಗಿಯಾಗಿ ಹಿಡಿದು, ತಪ್ಪಿಸಿಕೊಳ್ಳದಂತೆ ತಡೆಯುವುದನ್ನು ಕಾಣಬಹುದಾಗಿದೆ. ಇನ್ನೂ ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಅದ್ಭುತ, ಸೂಪರ್ ಎಂದು ಕಾನ್‍ಸ್ಟೆಬಲ್ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.