LATEST NEWS
ಕಟೀಲು ಯಕ್ಷಗಾನ ಮೇಳದ ಆಡಳಿತದ ವಿರುದ್ದ ಮಾನನಷ್ಟ ಮೊಕದ್ದಮೆ – ಪಟ್ಲ ಸತೀಶ್ ಶೆಟ್ಟಿ

ಕಟೀಲು ಯಕ್ಷಗಾನ ಮೇಳದ ಆಡಳಿತದ ವಿರುದ್ದ ಮಾನನಷ್ಟ ಮೊಕದ್ದಮೆ – ಪಟ್ಲ ಸತೀಶ್ ಶೆಟ್ಟಿ
ಮಂಗಳೂರು ನವೆಂಬರ್ 25: ನನ್ನನ್ನು ಮೇಳದಿಂದ ತೆಗೆದಿರೋದು ನನಗೆ ಮೊದಲೇ ಗೊತ್ತಿರಲಿಲ್ಲ. ಈ ಬಗ್ಗೆ ನಾನು ಯಾವುದೇ ಕ್ಷೇತ್ರದಲ್ಲಿ ಬೇಕಾದರೂ ಪ್ರಮಾಣ ಮಾಡಲು ಸಿದ್ದ ಎಂದು ಖ್ಯಾತ ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನನ್ನ ಹೆಸರಿಗೆ ಕಳಂಕ ತರುವ ಕೆಲಸವಾಗಿದೆ, ನಾನು ಕಟೀಲು ಮೇಳದ ಯಾವುದೇ ನಿಯಮ ಮೀರಿಲ್ಲ ಎಂದರು, ಒಂದು ವೇಳೆ ನಾನು ನಿಯಮ ಮೀರಿರೋದಾದ್ರೆ ಸಾಕ್ಷಿ ಸಮೇತ ವಿವರ ನೀಡಲಿ ಎಂದು ಆಗ್ರಹಿಸಿದರು. ಕಟೀಲು ಮೇಳದಲ್ಲಿ ಕಲಾವಿದರನ್ನು ಸರಿಯಾಗಿ ನೋಡಿಕೊಳ್ಳಲಾಗುತ್ತಿಲ್ಲ, ನನ್ನನ್ನು ಮೇಳದಿಂದ ತೆಗೆದಿರೋದು ಮೊದಲೇ ಗೊತ್ತಿರಲಿಲ್ಲ ಈ ಬಗ್ಗೆ ಯಾವ ಕ್ಷೇತ್ರದಲ್ಲಿ ಬೇಕಾದರೂ ಪ್ರಮಾಣ ಮಾಡಲು ನಾನು ಸಿದ್ಧನಾಗಿದ್ದು, ಸಂಚಾಲಕರು ಕಟೀಲು ಕ್ಷೇತ್ರದಲ್ಲೇ ಸುಳ್ಳು ಆರೋಪ ಮಾಡಿದ್ದಾರೆ ಎಂದು ಆರೋಪಿಸಿದರು.

ನನ್ನನ್ನು ಸಾರ್ವಜನಿಕವಾಗಿ ಅವಮಾನ ಮಾಡಿದ ಹಿನ್ನಲೆ ದಕ್ಷಿಣಕನ್ನಡ ಜಿಲ್ಲಾಧಿಕಾರಿಗೆ ದೂರು ನೀಡಲಿದ್ದೆ ಎಂದ ಅವರು , ಕಟೀಲು ಮೇಳದ ಆಡಳಿತ ಮಂಡಳಿ ವಿರುದ್ದ ಮಾನನಷ್ಟ ಮೊಕದಮೆ ಹೂಡುವುದಾಗಿ ತಿಳಿಸಿದರು. ಮೇಳದ ಆಡಳಿತ ಮಂಡಳಿ ಹೈಕೋರ್ಟ್ ನಿಯಮ ಉಲ್ಲಂಘನೆ ಮಾಡಿದ್ದಾರೆ. ಮೇಳದ ಆಡಳಿತ ಮಂಡಳಿ ಹಾಗೂ ಕಟೀಲು ಮೇಳದ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ವಿರುದ್ದ ಕೋರ್ಟ್ ಗೆ ದೂರು ನೀಡಲಾಗುವುದು ಎಂದು ಹೇಳಿದರು.