LATEST NEWS
ಮಣಿಪುರ ಬೆತ್ತಲೆ ಪ್ರಕರಣ – ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಆ ಕೆಲಸ ನಾವು ಮಾಡುತ್ತೇವೆ – ಸಿಜೆಐ ಚಂದ್ರಚೂಡ್
ದೆಹಲಿ ಜುಲೈ 20 : ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದಲ್ಲಿ ಮಹಿಳೆಯರನ್ನು ನಗ್ನಗೊಳಿಸಿ ಮರವಣಿಗೆ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದ್ದು, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಧೀಶ ಚಂದ್ರಚೂಡ್ ಕೇಂದ್ರ ಸರಕಾರದ ವಿರುದ್ದ ಗರಂ ಆಗಿದ್ದು, ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಆ ಕೆಲಸ ನಾವು ಮಾಡುತ್ತೇವೆ ಎಂದು ಗುಡುಗಿದ್ದಾರೆ.
ಕಳೆದ ಮೂರು ನಾಲ್ಕು ತಿಂಗಳಿನಿಂದ ಮಣಿಪುರದಲ್ಲಿ ಹಿಂಸಾಚಾರ ಮುಂದುವರೆದಿದ್ದು, ಹಿಂಸಾಚಾರ ನಿಲ್ಲಿಸಲು ಕೇಂದ್ರ ಸರಕಾರ ಯಾವುದೇ ರೀತಿಯ ಕ್ರಮಕೈಗೊಂಡಿಲ್ಲ, ಇದೀಗ ಹಿಂಸಾಚಾರದ ವೇಳೆ ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿರುವ ವಿಡಿಯೋ ವೈರಲ್ ಆಗಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಇದೀಗ ಈ ವಿಚಾರಕ್ಕೆ ಸುಪ್ರೀಂಕೋರ್ಟ್ ಕೆಂಡಮಂಡಲವಾಗಿದ್ದು. ಮಣಿಪುರ ಮಹಿಳೆಯರ ಬೆತ್ತಲೆ ಮೆರವಣಿಗೆ ಒಪ್ಪಲು ಸಾಧ್ಯವೇ ಇಲ್ಲ. ಕೋಮುಗಲಭೆ ಪೀಡಿತ ಪ್ರದೇಶದಲ್ಲಿ ಮಹಿಳೆಯರನ್ನು ಸಾಧನವಾಗಿ ಬಳಸುವುದು ಹೇಯ ಸಾಂವಿಧಾನಿಕ ನಿಂದನೆ. ವೀಡಿಯೊಗಳಿಂದ ತೀವ್ರ ವಿಚಲಿತರಾಗಿದ್ದೇವೆ. ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಆ ಕೆಲಸ ನಾವು ಮಾಡುತ್ತೇವೆ ಎಂದು ಗುಡುಗಿದ್ದಾರೆ ಸಿಜೆಐ ಚಂದ್ರಚೂಡ್.
ನಾವು ಕ್ರಮ ತೆಗೆದುಕೊಳ್ಳಲು ಸರ್ಕಾರಕ್ಕೆ ಸ್ವಲ್ಪ ಸಮಯ ನೀಡುತ್ತೇವೆ ಇಲ್ಲದಿದ್ದರೆ ನಾವು ಹೆಜ್ಜೆ ಹಾಕುತ್ತೇವೆ” ಎಂದು ಸಿಜೆಐ ಅವರು ಅಪರಾಧಿಗಳನ್ನು ಬಂಧಿಸಲು ಮೇ ತಿಂಗಳಿನಿಂದ ಅಧಿಕಾರಿಗಳು ಕೈಗೊಂಡ ಕ್ರಮಗಳ ವಿವರಗಳನ್ನು ಕೇಳಿದ ನಂತರ ಮತ್ತು ಇದು ಪುನರಾವರ್ತನೆಯಾಗದಂತೆ ನೋಡಿಕೊಳ್ಳಲು ಸರ್ಕಾರವು ಏನು ಕ್ರಮ ಕೈಗೊಂಡಿದೆ ಎಂದು ಎಚ್ಚರಿಸಿದರು. “ಇದು ಪ್ರತ್ಯೇಕವಾಗಿದೆಯೇ ಅಥವಾ ಮಾದರಿ ಇದೆಯೇ ಎಂದು ಯಾರಿಗೆ ತಿಳಿದಿದೆ” ಎಂದು ಸಿಜೆಐ ಹೇಳಿದರು.