DAKSHINA KANNADA
ಹಿಂದುತ್ವದ ಆಧಾರದಲ್ಲಿ ಮತದಾರನ ಬಳಿ ತೆರಳಲು ನಿರ್ಧಾರ: ಅರುಣ್ ಪುತ್ತಿಲ
ಪುತ್ತೂರು, ಎಪ್ರಿಲ್ 15: ಬಿಜೆಪಿ ರಾಜ್ಯಾಧ್ಯಕ್ಷರ ಊರಿನಲ್ಲೇ ಬಂಡಾಯದ ಬಿಸಿ ಏರಿದ್ದು, ಪುತ್ತೂರು ವಿಧಾನಸಭಾ ಚುನಾವಣೆಯ ಟಿಕೆಟ್ ವಂಚಿತ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಪಕ್ಷೇತರ ಅಭ್ಯರ್ಥಿಯಾಗಿ ಪುತ್ತಿಲ ಕಣಕ್ಕೆ ಇಳಿಯುವುದಾಗಿ ಹೇಳಿದ್ದಾರೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅರುಣ್ ಕುಮಾರ್ ಪುತ್ತಿಲ ಕಳೆದ ಬಾರಿಯೂ ಪುತ್ತೂರು ವಿಧಾನಸಭಾ ಚುನಾವಣೆ ಟಿಕೆಟ್ ಅಕಾಂಕ್ಷಿಯಾಗಿದ್ದೆ. ಈ ಬಾರಿಯೂ ಕೊನೆ ಕ್ಷಣದಲ್ಲಿ ಟಿಕೆಟ್ ಕೈ ತಪ್ಪಿದೆ. ಇದು ಕಾರ್ಯಕರ್ತರ ಆಕ್ರೋಶ ಕ್ಕೆ ಕಾರಣವಾಗಿದ್ದು, ಬಿಜೆಪಿ ಜಾತಿ ಸಮೀಕರಣ ಮಾಡ ಹೊರಟಿದೆ, ಒಕ್ಕಲಿಗ ಸಮುದಾಯಕ್ಕೆ ಸೇರಿದ ಆಶಾ ತಿಮ್ಮಪ್ಪ ಗೌಡ ಗೆ ಟಿಕೆಟ್ ನೀಡಿದೆ ಎಂದರು.
ಹಿಂದೂ ಕಾರ್ಯಕರ್ತರಿಂದ ಪಕ್ಷೇತರವಾಗಿ ಸ್ಪರ್ಧೆ ಮಾಡುವಂತೆ ಒತ್ತಾಯ ಬಂದ ಹಿನ್ನಲೆಯಲ್ಲಿ, ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವುದಾಗಿ ತಿರ್ಮಾನ ಮಾಡಿದ್ದೆನೆ. ಪಕ್ಷೇತರ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಲಿದದ್ದೇನೆ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದ್ದಾರೆ.
ಆರ್ ಎಸ್ ಎಸ್ ಪ್ರಮುಖರಿಂದ ಅರುಣ್ ಪುತ್ತಿಲ ಮನವೊಲಿಸಲು ಪ್ರಯತ್ನ ಪಟ್ಟರು ಅದು ವಿಫಲವಾಗಿದೆ. ಹಿಂದುತ್ವದ ಆಧಾರದಲ್ಲಿ ಮತದಾರನ ಬಳಿ ತೆರಳಲು ಅರುಣ್ ಪುತ್ತಿಲ ನಿರ್ಧಾರ ಮಾಡಿದ್ದು, ಗೆದ್ದು, ಬಿಜೆಪಿಗೆ ಬೆಂಬಲವಾಗಿಯೇ ನಿಲ್ಲುತ್ತೇನೆ, ಬಿಜೆಪಿ ನಾಯಕರಿಗೆ ಬುದ್ದಿ ಕಲಿಸೋದೇ ನನ್ನ ಗುರಿ ಎಂದು ಅರುಣ್ ಕುಮಾರ್ ಪುತ್ತಿಲ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.