LATEST NEWS
ಮಲ್ಪೆ ಸಮುದ್ರ ಪಾಲಾಗಿದ್ದ ಕೊಡಗಿನ ಯುವತಿಯ ಮೃತದೇಹ ಪತ್ತೆ

ಉಡುಪಿ ಜುಲೈ 02: ನಿನ್ನೆ ಮಲ್ಪೆ ಬೀಚ್ ನಲ್ಲಿ ಈಜುವಾಗ ಸಮುದ್ರಪಾಲಾಗಿದ್ದ ಕೊಡಗಿನ ಯುವತಿಯ ಮೃತದೇಹ ಇಂದು ಮಲ್ಪೆ ಸೀವಾಕ್‌ನ ಬಳಿ ಪತ್ತೆಯಾಗಿದೆ.ಮೃತ ಯುವತಿಯನ್ನು ಕೊಡಗು ಜಿಲ್ಲೆಯ ಅಮ್ಮತ್ತಿಯ ಯು.ಜೆ.ದೇಚಮ್ಮ (20) ಎಂದು ಗುರುತಿಸಲಾಗಿದೆ.
ಮೈಸೂರಿನ ವಿಜಯಪುರದ ಎಂ.ಯು.ಶೈನಿ ಸ್ನೇಹಿತರಾದ ನವ್ಯ ಮಂದಣ್ಣ, ನಿಖಿಲ್ ಗೌಡ, ದೇಚಮ್ಮ ಅವರ ಜತೆ ಶನಿವಾರ ಮಲ್ಪೆ ಬೀಚ್‌ಗೆ ಪ್ರವಾಸಕ್ಕೆ ಬಂದಿದ್ದರು. ಇಲ್ಲಿನ ಬ್ಲೂಬೇ ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದ ಸ್ನೇಹಿತರು ಭಾನುವಾರ ಸಮುದ್ರಕ್ಕಿಳಿದಾಗ ಅಲೆಗಳ ಸೆಳೆತಕ್ಕೆ ಸಿಲುಕಿದ್ದರು.

ಸ್ಥಳೀಯರು ಹಾಗೂ ಬೀಚ್‌ನ ಸಿಬ್ಬಂದಿ ಸಮುದ್ರದಾಳಕ್ಕೆ ಹೋಗದಂತೆ ಎಚ್ಚರಿಕೆ ನೀಡಿದರೂ ಕಡೆಗಣಿಸಿ ಸಮುದ್ರದಲ್ಲಿ ಆಟ ಆಡಲು ತೆರಳಿದ್ದಾರೆ. ಆದರೆ ನೀರಿನ ಸೆಳೆತಕ್ಕೆ ಸಿಲುಕಿ ಕೊಡಗು ಜಿಲ್ಲೆಯ ಅಮ್ಮತ್ತಿಯ ಯು.ಜೆ.ದೇಚಮ್ಮ ಸಮುದ್ರಪಾಲಾಗಿದ್ದರು, ದೇಚಮ್ಮ ಜತೆಗೆ ಸಮುದ್ರಕ್ಕಿಳಿದು ಅಪಾಯಕ್ಕೆ ಸಿಲುಕಿದ್ದ ಎಂ.ಯು.ಶೈನಿ, ನವ್ಯ ಮಂದಣ್ಣ ಹಾಗೂ ನಿಖಿಲ್ ಗೌಡ ಎಂಬುವರನ್ನು ಮೀನುಗಾರರು ರಕ್ಷಿಸಿದ್ದಾರೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲು