Connect with us

    LATEST NEWS

    5 ದಶಕಗಳ ಬಳಿಕ ಪತ್ತೆಯಾದ ವಾಯುಪಡೆ ಯೋಧನ ಮೃತದೇಹ, ಪತಿಗಾಗಿ ಕಾಯುತ್ತಿದ್ದ ಪತ್ನಿ 25 ವರ್ಷಗಳ ಹಿಂದೆ ಮೃತ್ಯು..!

    ಮೀರಠ್: 56 ವರ್ಷಗಳಿಗಿಂತ ಹೆಚ್ಚು ಕಾಲದ ನಂತರ ವಿಮಾನ ಅಪಘಾತದಲ್ಲಿ ಮೃತಪಟ್ಟ  ನಾಲ್ಕು ಭಾರತೀಯ ಸೈನಿಕರ ಪ್ರೀತಿಪಾತ್ರರಿಗೆ ಈಗ ಅಂತಿಮ ವಿದಾಯ ಹೇಳುವ ಅವಕಾಶ ಸಿಗಲಿದೆ. ಭಾರತೀಯ ಸೇನೆಯು 1968 ರಲ್ಲಿ ಹಿಮಾಚಲ ಪ್ರದೇಶದ ಲಾಹೌಲ್ (ದುಮ್ಮಿಲೆ)ನಲ್ಲಿ  ದುರಂತಕ್ಕೀಡಾದ AN-12 ವಿಮಾನದ ಅವಶೇಷಗಳಿಂದ ನಾಲ್ಕು ಸೈನಿಕರ ಮೃತದೇಹಗಳನ್ನು 5 ದಶಕಗಳ ಬಳಿಕ ಪತ್ತೆಹಚ್ಚಿದೆ.

    102 ಮಂದಿಯನ್ನು ಹೊತ್ತಿದ್ದ ಅಂಟೊನೋವ್-12 ವಿಮಾನ 1968ರ ಫೆಬ್ರವರಿ 7ರಂದು ನಾಪತ್ತೆಯಾದಾಗ ಭಾರತೀಯ ವಾಯಪಡೆಯ ಯೋಧ ಮಲ್ಖನ್ ಸಿಂಗ್ ಗೆ 23 ವರ್ಷ. ಬಳಿಕ ಅದು ಹಿಮಾಚಲದ ರೋಹ್ಟಂಗ್ ಪಾಸ್ ನಲ್ಲಿ ಅಪಘಾತಕ್ಕೀಡಾದ್ದು ತಿಳಿದುಬಂದಿತ್ತು. ಉತ್ತರ ಪ್ರದೇಶದ ಸಹರಣಪುರ ಜಿಲ್ಲೆಯ ಫತೇಪುರದಲ್ಲಿರುವ ಮಲ್ಖನ್ ಅವರ ಹಳೆಯ ಮನೆಗೆ ಮಂಗಳವಾರ ಇಬ್ಬರು ಸೇನಾ ಅಧಿಕಾರಿಗಳು ಆಗಮಿಸಿ, ಮಲ್ಖನ್ ಅವರ ಮೃತದೇಹದ ಅವಶೇಷಗಳು ಪತ್ತೆಯಾಗಿವೆ ಎಂದು ಮಾಹಿತಿ ನೀಡಿದರು. ಆಗ ಮೊದಲು ಮೌನ, ಬಳಿಕ ಸಂತಸ, ಬಳಿಕ ಕಣ್ಣೀರು. ಪ್ರತಿಯೊಬ್ಬರ ಮನಸ್ಸು ತುಂಬಿಬಂದಿತ್ತು. ಮೃತ ಯೋಧನ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡಿಕೊಳ್ಳಲು ಕುಟುಂಬಕ್ಕೆ ತಿಳಿಸಲಾಯಿತು. ಅವರಿಗಾಗಿಯೇ 32 ವರ್ಷ ಕಾದ ಪತ್ನಿ ಈ ಭಾವನಾತ್ಮಕ ಕ್ಷಣದಲ್ಲಿ ಜೀವಂತ ಇರಲಿಲ್ಲ.

    ಆತ ಮೃತಪಟ್ಟಿದ್ದಾನೆ ಎಂದು ನಂಬಲು ಕೂಡಾ ಆಗುತ್ತಿರಲಿಲ್ಲ. ಕಾರಣ ಆತ ಚಿರ ಯುವಕನಾಗಿದ್ದ ಆತ ಎಲ್ಲಾದರೂ ಇರಬಹುದು. ಒಂದಲ್ಲ ಒಂದು ದಿನ ಬಂದೇ ಬರುತ್ತಾನೆ ಎಂಬ ನಿರೀಕ್ಷೆಯಲ್ಲಿ ಆತನ ಪತ್ನಿ ಇದ್ದಳು. ಆತ ನಾಪತ್ತೆಯಾದಾಗ ಆಕೆಗೆ ಆಗಷ್ಟೇ ಹುಟ್ಟಿದ ಪುಟ್ಟ ಮಗ ಇದ್ದ. ಜೀವನವಿಡೀ ಕಾದ ಆಕೆ 2000 ಸುಮಾರಿಗೆ ಕೊನೆಯುಸಿರೆಳೆದಳು” ಎಂದು ಮಲ್ಖನ್ ಸಹೋದರ ಇಶಾಮ್ ಪಾಲ್ (65)ಹೇಳಿದ್ದಾರೆ.

    “ಆತನ ಹುಡುಕಾಟದಲ್ಲಿ ಸಾಕಷ್ಟು ಅಲೆದ ಬಳಿಕ ನಾವು ನಿರೀಕ್ಷೆ ಕೈಬಿಟ್ಟಿದ್ದೆವು. ಹಲವು ವರ್ಷ ಕಾಲ ಪತ್ತೆಯಾಗದೇ ಇದ್ದಾಗ ಕುಟುಂಬ ಹೊಂದಾಣಿಕೆ ಮಾಡಿಕೊಂಡಿತು. ಮಲ್ಖನ್ ಪತ್ನಿ ಆತನ ಸಹೋದರ ಚಂದ್ರಪಾಲ್ ಸಿಂಗ್ನನ್ನು ವಿವಾಹವಾದಳು. ಮಲ್ಖನ್ ಅವರ ಏಕೈಕ ಪುತ್ರ ರಾಮಪ್ರಸಾದ್ ಗೆ ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರು. ರಾಮಪ್ರಸಾದ್ 2010ರಲ್ಲಿ ಮೃತಪಟ್ಟರು. ಮಲ್ಖನ್ ಪೋಷಕರು, ಪತ್ನಿ ಹಾಗೂ ಪುತ್ರನ ಕಾಯುವಿಕೆಯಲ್ಲೇ ಜೀವನ ಅಂತ್ಯಗೊಳಿಸಿದರು” ವಿಶ್ವಾಸ್ ಭಾವುಕರಾದರು.

    ಭಾರತೀಯ ವಾಯುಪಡೆಯ (IAF) AN-12 ವಿಮಾನವು 102 ಸೇನಾ ಸಿಬ್ಬಂದಿಯನ್ನು ಹೊತ್ತು ಚಂಡೀಗಢದಿಂದ ಲೇಹ್‌ಗೆ ನಿಯಮಿತ ವಿಮಾನ ಪ್ರಯಾಣದಲ್ಲಿದ್ದಾಗ ಫೆಬ್ರವರಿ 7, 1968 ರಂದು ರೋಹ್ಟಂಗ್ ಪರ್ವತ ಪ್ರದೇಶದ ಮೇಲೆ ಕಣ್ಣರೆಯಾಗಿತ್ತು.  ದಶಕಗಳಿಂದ ಸೇನೆಯು ದುರ್ದೈವಿ ವಿಮಾನದ ಅವಶೇಷಗಳನ್ನು ಪತ್ತೆಹಚ್ಚಲು ವಿಫಲ ಪ್ರಯತ್ನ ನಡೆಸಿತ್ತು. 2003 ರಲ್ಲಿ ಮಾತ್ರ ಅಟಲ್ ಬಿಹಾರಿ ವಾಜಪೇಯಿ ಪರ್ವತಾರೋಹಣ ಸಂಸ್ಥೆಯ ಪರ್ವತಾರೋಹಿಗಳು ವಿಮಾನದ ಅವಶೇಷಗಳನ್ನು ಪತ್ತೆಹಚ್ಚಿದರು.  ಭಾರತೀಯ ಸೇನೆಯ ಡೋಗ್ರಾ ಸ್ಕೌಟ್ಸ್ 2005, 2006, 2013 ಮತ್ತು 2019 ರಲ್ಲಿ ಮೃತದೇಹಗಳ ಹುಡುಕಾಟದಲ್ಲಿ ಹಲವಾರು ವಿಫಲ ಪ್ರಯತ್ನಗಳನ್ನು ಕೈಗೊಂಡಿತ್ತು. 2019 ರ ವೇಳೆಗೆ, 102 ಪ್ರಯಾಣಿಕರಲ್ಲಿ ಒಟ್ಟು ಐದು ದೇಹಗಳನ್ನು ಪತ್ತೆಹಚ್ಚಲಾಯಿತು, ಅವುಗಳಲ್ಲಿ 2018 ರಲ್ಲಿ 6,200 ಮೀಟರ್ ಎತ್ತರದಲ್ಲಿರುವ ಢಾಕಾ ಹಿಮದಾಳದ ತಳದಲ್ಲಿ ಪತ್ತೆಯಾದ ಒಂದು ದೇಹವೂ ಸೇರಿದೆ. ಯುದ್ದ ವಿಮಾನ ಮತ್ತು ಅದರ ಅವಶೇಷಗಳಿಗಾಗಿ ನಡೆದ ವಿಶ್ವದ ಸುದೀರ್ಘ ಪತ್ತೆ ಕಾರ್ಯಾಚರಣೆಯಾಗಿದೆ.

     

    Share Information
    Advertisement
    Click to comment

    Leave a Reply

    Your email address will not be published. Required fields are marked *