LATEST NEWS
ನಾಪತ್ತೆಯಾಗಿದ್ದ ಗೃಹಿಣಿಯ ಮೃತದೇಹ ಬಾವಿಯಲ್ಲಿ ಪತ್ತೆ…!!

ಉಡುಪಿ ಅಕ್ಟೋಬರ್ 09: ಕಳೆದ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಗೃಹಿಣಿಯ ಶವ ಇಂದು ಬಾವಿಯಲ್ಲಿ ಶವವಾಗಿ ಪತ್ತೆಯಾಗಿರುವ ಗಟನೆ ಪಣೀಯೂರಿನಲ್ಲಿ ನಡೆದಿದೆ. ಮೃತರನ್ನು ನಾಪತ್ತೆಯಾಗಿದ್ದ ರಕ್ಷಿತ(24) ಎಂದು ಗುರುತಿಸಲಾಗಿದ್ದು, ಇವರ ಮನೆ ಪಕ್ಕದ ಪಾಳು ಬಾವಿಯಲ್ಲಿ ಶವಪತ್ತೆಯಾಗಿದೆ
ಎರಡು ವರ್ಷದ ಹಿಂದೆ ಪಣಿಯೂರು ನಾರಾಯಣ ಪೂಜಾರಿಯವರ ಮಗಳು ರಕ್ಷಿತ ಮತ್ತು ಸಂಜಯ ಆಚಾರಿ ಅವರೊಂದಿಗೆ ಪ್ರೇಮ ವಿವಾಹವಾಗಿದ್ದು, ಕೆಲ ಸಮಯದಿಂದ ಇವರ ಸಂಬಂಧದಲ್ಲಿ ಒಡಕು ಉಂಟಾಗಿದ್ದು, ಶನಿವಾರ ಸಂಜೆ ರಕ್ಷಿತಳ ಮೃತದೇಹ ಮನೆ ಪಕ್ಕದ ಪಾಳು ಬಾವಿಯಲ್ಲಿ ಪತ್ತೆಯಾಗಿದೆ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
