DAKSHINA KANNADA
ಸುಳ್ಯ – ಪಾರ್ಕ್ ಮಾಡಿದ್ದ ಕಾರಿನಲ್ಲಿ ಯುವಕನ ಮೃತದೇಹ

ಸುಳ್ಯ ಅಕ್ಟೋಬರ್ 9: ಪಾರ್ಕ್ ಮಾಡಲಾಗಿದ್ದ ಕಾರಿನಲ್ಲಿ ಯುವಕನ ಮೃತದೇಹ ಪತ್ತೆಯಾದ ಘಟನೆ ಸುಳ್ಯ ಸರ್ಕಾರಿ ಆಸ್ಪತ್ರೆ ಮುಂಭಾಗ ನಡೆದಿದ್ದು. ಶವವನ್ನು ಪರೀಕ್ಷಿಸಿದಾಗ ನಾಲ್ಕು ದಿನಗಳ ಹಿಂದೆಯೇ ಮೃತಪಟ್ಟಿರಬೇಕೆಂಬ ಶಂಕೆ ವ್ಯಕ್ತವಾಗಿದೆ.
ಮೃತ ವ್ಯಕ್ತಿಯನ್ನು ಪೆರಾಜೆಯ ಪೆರಂಗಜೆ ಲೋಕಯ್ಯ ಗೌಡ ಎಂಬವರ ಪುತ್ರ ಗೌರೀಶ್ (30) ಎಂದು ಗುರುತಿಸಲಾಗಿದೆ. ವಿಪರೀತ ಕುಡಿತದ ಚಟ ಹೊಂದಿದ್ದ ಗೌರೀಶ್, ಗುರುವಾರ ಸಂಜೆ ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ಕಾರು ಪಾರ್ಕ್ ಮಾಡಿದ್ದ. ಕುಡಿತದ ಕಾರಣದಿಂದಲೇ ಮೃತಪಟ್ಟಿರಬೇಕೆಂದು ಶಂಕಿಸಲಾಗಿದೆ. ಮೃತದೇಹ ಬಾತುಕೊಂಡಿದ್ದು, ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆ ಸನಿಹದಲ್ಲಿದ್ದವರು ಭಾನುವಾರ ಬೆಳಗ್ಗೆ ಕಾರನ್ನು ನೋಡಿದಾಗ ಅದರಲ್ಲಿ ಶವ ಇರುವುದು ಪತ್ತೆಯಾಗಿತ್ತು.
