DAKSHINA KANNADA
ನಾಲ್ಕು ದಿನಗಳ ಬಳಿಕ ಪತ್ತೆಯಾದ ಮೃತದೇಹ….!!

ಸುಳ್ಯ, ಜುಲೈ 9: ಅಲೆಟ್ಟಿ ಗ್ರಾಮದ ಕೂರ್ನಡ್ಕ್ ಎಂಬಲ್ಲಿ ನಾಲ್ಕು ದಿನದ ಹಿಂದೆ ಕಾಲುಸಂಕ ದಾಟುತ್ತಿದ್ದ ವೇಳೆ ಕಾಲು ಜಾರಿ ಬಿದ್ದು ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಇಂದು ಪತ್ತೆಯಾಗಿದೆ. ಮೃತಪಟ್ಟವರನ್ನು ಕಾಸರಗೋಡು ಜಿಲ್ಲೆಯ ಈಸ್ಟ್ ಎಳೇರಿ ಪಂಚಾಯತ್ನ ಚಿಟ್ಟಾರಿಕಾಲ್ ಸಮೀಪದ ಕಡುಮೇನಿಯ ನಾರಾಯಣನ್ (45) ಎಂದು ಗುರುತಿಸಲಾಗಿದೆ.
ಕೂರ್ನಡ್ಕದಲ್ಲಿ ಗುರುವಾರ ಸಂಜೆ ಕಾಲುಸಂಕ ದಾಟುತ್ತಿದ್ದ ವೇಳೆ ನಾರಾಯಣನ್ ಆಕಸ್ಮಿಕವಾಗಿ ಕಾಲುಜಾರಿ ಪಯಸ್ವಿನಿ ನದಿಯನ್ನು ಸಂಪರ್ಕಿಸುವ ತೋಡಿಗೆ ಬಿದ್ದು ನಾಪತ್ತೆಯಾಗಿದ್ದರು. ಅವರಿಗಾಗಿ ಕಳೆದ ಮೂರು ದಿನಗಳಿಂದ ಅಗ್ನಿಶಾಮಕ ದಳ, ಪೊಲೀಸ್, ಎಸ್.ಡಿ.ಆರ್.ಎಫ್. ತಂಡ ಹಾಗೂ ಸ್ಥಳೀಯ ಈಜುಗಾರರು ಭಾರೀ ಮಳೆಯ ನಡುವೆ ನಿರಂತರ ಶೋಧ ನಡೆಸಿದರೂ ಪತ್ತೆಯಾಗಿರಲಿಲ್ಲ. ಇಂದು ಮಧ್ಯಾಹ್ನ ಘಟನೆ ಸಂಭವಿಸಿದ ಸ್ಥಳದಿಂದ ಸುಮಾರು 4 ಕಿ.ಮೀ. ದೂರದಲ್ಲಿ ಅವರ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ
