LATEST NEWS
ಮಳೆ ಬಂದರೆ ಡಿಗ್ರಿ ವಿಧ್ಯಾರ್ಥಿಗಳಿಗೆ ಯಾಕೆ ರಜೆ ಕೊಡಲ್ಲ ಎನ್ನುವ ಪ್ರಶ್ನೆಗೆ ಜಿಲ್ಲಾಧಿಕಾರಿ ಮುಲ್ಲೈಮುಗಿಲನ್ ಉತ್ತರ
ಮಂಗಳೂರು ಅಗಸ್ಟ್ 02: ಕೊನೆಗೂ ಬಹು ಜನರ ಪ್ರಶ್ನೆಯಾಗಿರುವ ಡಿಗ್ರಿ ವಿಧ್ಯಾರ್ಥಿಗಳಿಗೆ ಮಳೆ ಬಂದಾಗ ಯಾಕೆ ರಜೆ ನೀಡುವುದಿಲ್ಲ ಎನ್ನುವುದಕ್ಕೆ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಉತ್ತರ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಈಗಾಗಲೇ 10ಕ್ಕೂ ಹೆಚ್ಚು ದಿನ ಶಾಲೆಗಳಿಗೆ ರಜೆ ಸಿಕ್ಕಿದೆ. ಪ್ರತಿಭಾರಿಯೂ ದ್ವಿತಿಯ ಪಿಯುಸಿಯವರೆಗೆ ಮಾತ್ರ ರಜೆ ಸಿಗುವ ಕಾರಣ ಡಿಗ್ರಿ ಓದುತ್ತಿರುವ ವಿಧ್ಯಾರ್ಥಿಗಳು ತಮ್ಮ ಅಸಮಧಾನ ಹೊರಹಾಕಿದ್ದರು. ಇದೀಗ ಯಾಕೆ ಪದವಿ ವಿಧ್ಯಾರ್ಥಿಗಳಿಗೆ ರಜೆ ನೀಡಲ್ಲ ಎನ್ನುವುದಕ್ಕೆ ಸ್ವತಃ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಪದವಿ ವಿಧ್ಯಾರ್ಥಿಗಳು 18 ವಯಸ್ಸಿನವರಾಗಿದ್ದು, ದೇಶ ಕಾಯುವ ಸೈನಿಕರಾಗಿ ಹೋಗುವ ಅರ್ಹತೆ ಇರುವವರು. ಒಂದು ವೇಳೆ ದೊಡ್ಡ ಮಟ್ಟದ ಪ್ರಾಕೃತಿಕ ವಿಕೋಪಗಳು ಉಂಟಾದ ಸಂದರ್ಭದಲ್ಲಿ ಜನರ ರಕ್ಷಣೆ ಮಾಡಲು ಪದವಿ ವಿಧ್ಯಾರ್ಥಿಗಳು ನಮಗೆ ಸಹಾಯಕ್ಕೆ ಬರುತ್ತಾರೆ. ಇಂತಹ ಸಂದರ್ಭದಲ್ಲಿ ಪದವಿ ವಿಧ್ಯಾರ್ಥಿಗಳು ನಮ್ಮ ಬೆನ್ನೆಲುಬಾಗಿ ನಿಲ್ಲುತ್ತಾರೆ. ಅವರು ಮನಗೆ ಯೋಧರು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.