LATEST NEWS
50 ವರ್ಷತುಂಬಿದ ದೈವನರ್ತಕರಿಗೆ ಸರಕಾರ ಮಾಸಾಶನ ನೀಡಬೇಕು – ದಯಾನಂದ ಕತ್ತಲ ಸಾರ್

ಮಂಗಳೂರು ಅಕ್ಟೋಬರ್ 22: ದೈವ ನರ್ತಕರರಲ್ಲಿ 60 ವರ್ಷ ಮೇಲ್ಪಟ್ಟವರ ಸಂಖ್ಯೆ ತುಂಬಾ ಕಡಿಮೆ ಇರುವ ಕಾರಣ 50 ವರ್ಷ ದಾಟಿದ ದೈವನರ್ತಕರಿಗೂ ಸರ್ಕಾರ ಮಾಸಾಶನ ನೀಡಬೇಕು ಎಂದು ದಯಾನಂದ ಕತ್ತಲ ಸಾರ್ ಒತ್ತಾಯಿಸಿದ್ದಾರೆ.
ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೈವನರ್ತಕರಿಗೆ ಮಾಸಾಶನ ಪ್ರಕಟಿಸಿದ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು. ದೈವ ನರ್ತಕರು ಹಗಲು ರಾತ್ರಿಯೆನ್ನದೇ ದಿನದಲ್ಲಿ ಸತತ 16 ಗಂಟೆವರೆಗೂ ಸತತ ದೈವಾರಾಧನೆಯಲ್ಲಿ ತೊಡಗುವುದುಂಟು.

60 ವರ್ಷ ಮೀರಿದ ಬಳಿಕ ಮಾಸಾಶನ ಸಿಕ್ಕಿದರೆ, ಅದನ್ನು ಅನುಭವಿಸುವುದಕ್ಕೆ ಅವರಿಗೆ ಪ್ರಾಯ ಇರುವುದಿಲ್ಲ ಎಂದರು. ದೈವದ ಕೋಲ ಕಟ್ಟುವವರು ಮಾತ್ರ ದೈವಗಳ ಸೇವೆ ಮಾಡುವುದಲ್ಲ. ದರ್ಶನ ಪಾತ್ರಿಗಳು, ದೀವಟಿಕೆಯವರು, ವಾಲಗದವರು ಸೇರಿದಂತೆ ಇತರ 16 ಚಾಕರಿ ವರ್ಗಗಳಲ್ಲೂ ಶೋಷಿತರು ಇದ್ದಾರೆ. ಅವರಿಗೂ ಈ ಮಾಸಾಶನ ಸೌಲಭ್ಯ ವಿಸ್ತರಿಸಬೇಕು’ ಎಂದು ಅವರು ಒತ್ತಾಯಿಸಿದರು.