ಪುತ್ತೂರು, ಆಗಸ್ಟ್ 19: ಬಂಟ್ವಾಳದ ಮಂಚಿ ಸರಕಾರಿ ಶಾಲೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ವೀರ ಸಾವರ್ಕರ್ ಘೋಷಣೆ ವಿವಾದವನ್ನು ದಕ್ಷಿಣಕನ್ನಡ ಜಿಲ್ಲಾ ಬಿಜೆಪಿ ಖಂಡಿಸಿದೆ.
ಪುತ್ತೂರಿನಲ್ಲಿ ನಡೆದ ತಿರಂಗಾ ಯಾತ್ರೆ ಕಾರ್ಯಕ್ರಮದಲ್ಲಿ ಘಟನೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್.ಕೆ ಖಂಡಿಸಿದ್ದಾರೆ. ವೀರ ಸಾವರ್ಕರ್ ಗೆ ಜೈಕಾರ ಹಾಕಿದ್ದನ್ನು ಮತಾಂಧ ವ್ಯಕ್ತಿಯೋರ್ವ ಖಂಡಿಸಿದ್ದಾನೆ, ವೀರ ಸಾವರ್ಕರ್ ಗೆ ಘೋಷಣೆ ಹಾಕಿದ ವಿದ್ಯಾರ್ಥಿಗಳನ್ನು ಪ್ರಶಂಸಿಸುತ್ತೆನೆ.
ಸಾವರ್ಕರ್ ಹೆಸರಿನ ಮುಂದೆಯೇ ಸ್ವಾತಂತ್ರ್ಯ ವೀರ ಎನ್ನುವ ಪದನಾಮವಿದೆ, ಸ್ವಾತಂತ್ರ್ಯಕ್ಕಾಗಿ ಎರಡೆರಡು ಬಾರಿ ಕಲಾಪಾನಿಯಂತಹ ಕಾರಾಗೃಹ ದಲ್ಲಿ ಶಿಕ್ಷೆ ಅನುಭವಿಸಿದ ಹೋರಾಟಗಾರ. ಅಂತ ಸೇನಾನಿಯನ್ನು ಅವಮಾನಗೊಳಿಸುವ ಕಾರ್ಯ ನಡೆದಿದೆ. ಕಾಂಗ್ರೇಸ್ ಸರಕಾರ ವೀರ ಸಾವರ್ಕರ್ ರನ್ನು ನಿರಂತರವಾಗಿ ಅವಮಾನಿಸುವ ಕೆಲಸ ಮಾಡಿದೆ. ಸಾವರ್ಕರ್ ಘೋಷಣೆ ಇದೀಗ ರಾಜಕೀಯ ಬಣ್ಣ ಪಡೆದುಕೊಂಡಿದೆ.