Connect with us

    DAKSHINA KANNADA

    ದ.ಕ ಜಿಲ್ಲಾಧಿಕಾರಿಯವರ ಮೊಬೈಲ್ ನಂಬರ್ ಹ್ಯಾಕ್ : ಸಾರ್ವಜನಿಕರು ಮೋಸ ಹೋಗದಂತೆ ಡಿಸಿ ಮನವಿ..!

    ಮಂಗಳೂರು, ಸೆಪ್ಟೆಂಬರ್ 14: ಇದುವರೆಗೆ ವೆಬ್ ಸೈಟ್, ಫೇಸ್ ಬುಕ್ ಅಕಂಟ್‌ಗಳನ್ನು ಹ್ಯಾಕ್ ಮಾಡುತ್ತಿದ್ದ ಹ್ಯಾಕರ್ಸ್ ಗಳು ಇದೀಗ ಮೋಬೈಲ್ ನಂಬ್ರಗಳ ಮೇಲೂ ತಮ್ಮ ವಕ್ರದೃಷ್ಟಿಯನ್ನು ಹಾಯಿಸಿದ್ದಾರೆ.

    ಇದೀಗ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ‌.ವಿ. ಅವರ ಮೊಬೈಲ್ ನಂಬರ್ ಹ್ಯಾಕ್ ಆಗಿದೆ. 8590710748 ಮೊಬೈಲ್ ನಂಬರ್ ನಿಂದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರ ಹೆಸರು ಹಾಗೂ ಫೋಟೋ ಬಳಸಿ ವಾಟ್ಸ್ ಅಪ್ ಮೂಲಕ ಸಂದೇಶ  ಕಳುಹಿಸಿ ಅಪರಿಚಿತರು ಸಹಾಯ ಅಥವಾ ಹಣವನ್ನು ವರ್ಗಾಯಿಸಲು ಕೇಳಬಹುದು.

    ಆ ನಂಬರ್ ಜಿಲ್ಲಾಧಿಕಾರಿಯವರದ್ದಾಗಿರುವುದಿಲ್ಲ ಆದ ಕಾರಣ ಯಾರೂ ಕೂಡ ಯಾವುದೇ ರೀತಿಯಲ್ಲಿ ಸಹಾಯ ಅಥವಾ ಹಣವನ್ನು ಆ ನಂಬರ್ ಗೆ  ವರ್ಗಾಯಿಸದಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

    8590710748 ಈ ನಂಬರ್ ನಿಂದ ಯಾವುದೇ ರೀತಿಯ ಮನವಿ ಬಂದಲ್ಲಿ ಅದನ್ನು ಬ್ಲಾಕ್ ಮಾಡಿ ವರದಿ ಮಾಡುವಂತೆಯೂ ಜಿಲ್ಲಾಧಿಕಾರಿಯವರು ಕೋರಿದ್ದಾರೆ. ಈ ಬಗ್ಗೆ ಮಂಗಳೂರು ಪೊಲೀಸರಿಗೆ ದೂರು ನೀಡಲಾಗಿದ್ದು ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *