KARNATAKA
”ಡಾಬಾ ಬಂತು ಎದ್ದೇಳು” ಅಂದ ಕೂಡಲೇ ಕಣ್ಣು ಬಿಟ್ಟು ಉಸಿರಾಡಿದ ಮೃತ ವ್ಯಕ್ತಿ!
![](https://i0.wp.com/themangaloremirror.in/wp-content/uploads/2024/04/For-Advertisement-Please-Contact-1.jpg?fit=728%2C90&ssl=1)
ಹಾವೇರಿ: ಧಾರವಾಡದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೋರ್ವ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದರಿಂದ “ಮೃತದೇಹ’ವನ್ನು ಕುಟುಂಬದವರು ಆಯಂಬುಲೆನ್ಸ್‌ನಲ್ಲಿ ತರುವಾಗ ಪಟ್ಟಣದ ಗಡಿಯಲ್ಲಿರುವ ಡಾಬಾವೊಂದರ ಬಳಿ ಬರುತ್ತಿದ್ದಂತೆ “ಮೃತ ವ್ಯಕ್ತಿ’ ಕಣ್ಣು ಬಿಟ್ಟು ಉಸಿರಾಟ ಆರಂಭಿಸಿದ ಘಟನೆ ಬಂಕಾಪುರದಲ್ಲಿ ರವಿವಾರ ಸಂಭವಿಸಿದೆ.
ಡಾಬಾ ಸಮೀಪಿಸುತ್ತಿದ್ದಂತೆ “ಮೃತನ’ ಪತ್ನಿ ಜೋರಾಗಿ ಅಳುತ್ತ “ಈ ಡಾಬಾದ ಊಟವೆಂದರೆ ನಿನಗೆ ಇಷ್ಟ. ಎದ್ದೇಳು, ಊಟ ಮಾಡು, ಕಣ್ಣು ಬಿಡು’ ಎಂದು ಗೋಳಿಟ್ಟಳು. ಆಗ ಆತೆ ಕಣ್ಣು ಬಿಟ್ಟು ಉಸಿರಾಟ ಆರಂಭಿಸಿದನು. ಇದನ್ನು ಗಮನಿಸಿದ ಪತ್ನಿ ಸಂಬಂಧಿಕರು ಶಿಗ್ಗಾವಿ ಸರಕಾರಿ ಆಸ್ಪತ್ರೆ ಕರೆದೊಯ್ದರು. ಅಲ್ಲಿನ ವೈದ್ಯರು ಆತ ಜೀವಂತ ವಿರುವುದನ್ನು ಖಚಿತ ಪಡಿಸಿದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಿದ್ದಾರೆ.
![](https://i0.wp.com/themangaloremirror.in/wp-content/uploads/2024/06/IMG-20240626-WA0023.jpg?fit=1280%2C670&ssl=1)
ಬಿಷ್ಣಪ್ಪ ಗುಡಿಮನಿ ಮೃತಪಟ್ಟಿರುವುದಾಗಿ ಪಟ್ಟಣದಾದ್ಯಂತ ಬ್ಯಾನರ್ ಅಂಟಿಸಲಾಗಿತ್ತು ವ್ಯಾಟ್ಸ್ಆಯಪ್, ಫೇಸ್‌ಬುಕ್‌ನಲ್ಲಿ ಶ್ರದ್ಧಾಂಜಲಿ ಅರ್ಪಿಸ ಲಾಗಿತ್ತು. ಆತ ಬದುಕಿದ್ದಾನೆ ಎಂದು ತಿಳಿದ ತತ್‌ಕ್ಷಣ ಸಾರ್ವಜನಿಕರಿಂದ “ನೂರುಕಾಲ ಬದುಕಿ ಬಾಳಲಿ’ ಎಂಬ ಹಾರೈಕೆಯ ಸುರಿಮಳೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.