LATEST NEWS
ಚೆನ್ನೈ – ಚಂಡಮಾರುತದ ಅಬ್ಬರಕ್ಕೆ ಕೊನೆಕ್ಷಣದಲ್ಲಿ ಲ್ಯಾಂಡ್ ಆಗದೆ ಟೆಕಾಫ್ ಆದ ವಿಮಾನ – ಬೆಚ್ಚಿ ಬಿಳಿಸುವ ವಿಡಿಯೋ
ಚೆನ್ನೈ ಡಿಸೆಂಬರ್ 1: ಫೆಂಗಾಲ್ ಚಂಡಮಾರುತ ತಮಿಳುನಾಡಿಗೆ ಅಪ್ಪಳಿಸಿದ್ದು, ಭಾರೀ ಗಾಳಿಯೊಂದಿಗೆ ಮಳೆಯಾಗುತ್ತಿದೆ. ಈ ನಡುವೆ ಇಂಡಿಗೋ ವಿಮಾನವೊಂದು ಚೈನ್ನೈ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಲು ಆಗದೆ ಕೊನೆಯ ಕ್ಷಣದಲ್ಲಿ ಮತ್ತೆ ಟೆಕಾಫ್ ಆಗಿದೆ. ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇಂಡಿಗೋ ಏರ್‌ಲೈನ್ಸ್‌ನ ಏರ್‌ಬಸ್ ಎ 320 ನಿಯೋ ವಿಮಾನವು ಚೆನ್ನೈ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗಲು ಪ್ರಯತ್ನಿಸಿದೆ. ಆದರೆ ಮಳೆ ಹಾಗೂ ಗಾಳಿಯ ಅಬ್ಬರಕ್ಕೆ ರನ್ ವೇಗೆ ಟಚ್ ಆಗಿ ಮತ್ತೆ ವಿಮಾನವನ್ನು ಟೆಕಾಫ್ ಮಾಡಲಾಗಿದೆ. ಈ ಘಟನೆ ವಿಡಿಯೋ ವೈರಲ್ ಆಗಿದೆ.
An Airbus A320 Neo of Indigo Airlines flight aborts landing after touchdown at Chennai airport. Due to the presence of mind of the pilot, the flight was saved from crashing on Saturday amidst heavy rains & strong cross winds due to Cyclone Fengal#ChennaiRains #ChennaiRain pic.twitter.com/DGKtfSHg3D
— Karnataka Weather (@Bnglrweatherman) December 1, 2024